ಮಠದಿಂದ ಪ್ರಸಿದ್ಧ ಸಾಂಸ್ಕೃತಿಕ ಕಲಾವಿದರನ್ನು ಆಹ್ವಾನಿಸಿ ಸಂಗೀತ, ನೃತ್ಯ, ನಾಟಕ, ಹರಿಕಥೆ, ಯಕ್ಷಗಾನಗಳಂತಹ ಇನ್ನಿತರ ವೈವಿಧ್ಯಮಯ ಕಲಾ ಪ್ರಾಕಾರಗಳನ್ನು ಸಂಯೋಜಿಸಿದ್ದಲ್ಲದೆ, ಅವಕಾಶ ಕೋರಿ ಅರ್ಜಿ ಸಲ್ಲಿಸಿದವರಿಗೂ ಸಾಧ್ಯವಿದ್ದಷ್ಟು ವೇದಿಕೆ ಒದಗಿಸಿಕೊಟ್ಟಿದೆ. ಸಂಜೆ 4ರ ಅನಂತರ ಮಧ್ವಮಂಟಪ, 7ರ ಅನಂತರ ರಾಜಾಂಗಣದಲ್ಲಿ ಹಾಗೂ ರಜಾದಿನಗಳಲ್ಲಿ ಅಪರಾಹ್ನ, ಸಂಜೆ ಮತ್ತು ರಾತ್ರಿ ಎಂದು ಮೂರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
Advertisement
ಬೆಂಗಳೂರು, ಮೈಸೂರು, ಚೈನ್ನೈ, ಮುಂಬಯಿ ಮೊದಲಾದ ಕಡೆಯ ಸಂಘ-ಸಂಸ್ಥೆಗಳು, ಊರಿನ ಸಂಘಟನೆಗಳಿಗೆ ರಾಜಾಂಗಣದಲ್ಲಿ ಪ್ರದರ್ಶನಕ್ಕೆ ಸ್ಥಳೀಯ ಆತಿಥ್ಯದೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಕ್ಷಗಾನ ಸಪ್ತಾಹ, ಹರಿಕಥಾ ಸಪ್ತಾಹ ಹಾಗೂ ಸರಣಿ ನೃತ್ಯ ಸಂಗೀತ ಕಾರ್ಯಕ್ರಮಗಳು ಜರಗಿದವು. ಸೇವಾರೂಪದಲ್ಲಿ ಕಾರ್ಯಕ್ರಮ ನೀಡಿದವರಿಗೂ ಶ್ರೀಪಾದರು ಪ್ರಸಾದ ರೂಪದಲ್ಲಿ ಕಿರು ಸಂಭಾವನೆ ಸಹಿತ ಪ್ರಯಾಣ ವೆಚ್ಚ ಕೊಡುತ್ತಿದ್ದರು. ಸಂಭಾವನೆ ಸಹಿತ ಬಯಲಾಟದ ಹೆಚ್ಚಿನ ಮೇಳಗಳಿಗೆ ಅವಕಾಶ ನೀಡಲಾಗಿತ್ತು. ಶ್ರೀಪಾದರಿಗೆ ಅತೀ ಪ್ರಿಯವಾಗಿರುವ ಅವರ ಬಯಕೆಯಂತೆ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಿತ್ತು.
Related Articles
Advertisement
1947-48: ಇತಿಹಾಸದ ಮರುಸೃಷ್ಟಿ: 2017-18ಹಿರಿಯ ಪತ್ರಕರ್ತರಾಗಿದ್ದ ಎಂ.ವಿ. ಹೆಗ್ಡೆ ಅವರು ರಚಿಸಿ ಪ್ರಕಟಿಸಿದ್ದ ತಾಳಮದ್ದಳೆ 1947ರ ಆ. 14ರಂದು ಉಡುಪಿಯ ಶ್ರೀ ಅನಂತೇಶ್ವರ ಹೆಬ್ಟಾಗಿಲಿನಲ್ಲಿ ಜರಗಿತ್ತು. ಅನಂತರ 1948ರಲ್ಲಿಯೂ ಹೈದರಾಬಾದ್ ಪ್ರಾಂತ ಸ್ವತಂತ್ರವಾದಾಗ “ಹೈದರಾಬಾದ್ ವಿಜಯ’ ತಾಳಮದ್ದಲೆ ಭೋಜನಶಾಲೆಯಲ್ಲಿ ಪ್ರಸ್ತುತಗೊಂಡಿತು. ಎರಡೂ ಸಂದರ್ಭ ಉಪಸ್ಥಿತರಿದ್ದ ಪೇಜಾವರ ಮಠದ ಶ್ರೀಪಾದರು ಐದನೆಯ ಬಾರಿಯ ಐತಿಹಾಸಿಕ ಪರ್ಯಾಯದಲ್ಲಿ 70 ವರ್ಷಗಳ ಬಳಿಕ 2017ರ ಆ. 14 ಮತ್ತು 2018ರ ಡಿ. 17ರಂದು ಮತ್ತೂಮ್ಮೆ ಸಂಘಟಕ ಸುಧಾಕರ ಆಚಾರ್ಯರ ಆಯೋಜನೆಯಲ್ಲಿ ಪ್ರಸ್ತುತಿಗೊಂಡಿತು. ಅಂತಾರಾಷ್ಟ್ರೀಯ ಕಲಾವಿದರು
ಪಂಡಿತ್ ರಾಜನ್ ಮಿಶ್ರ, ಸಾಜನ್ ಮಿಶ್ರ, ಪಂ| ವೆಂಕಟೇಶ್ ಕುಮಾರ್, ಪಂ| ಜಯತೀರ್ಥ ಮೇವುಂಡಿ, ಜಾಕೀರ್ ಹುಸೇನ್, ಕದ್ರಿ ಗೋಪಾಲನಾಥ್, ಜೇಸುದಾಸ್, ಡಾ| ಪದ್ಮಾ ಸುಬ್ರಹ್ಮಣ್ಯಂ, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಕರೈಕುಡಿ ಮಣಿ, ಕುಮರೇಶ್, ರಾಹುಲ್ ಶರ್ಮ, ಶಂಕರಕಂದ ಸ್ವಾಮಿ, ಲಕ್ಷ್ಮೀ ಗೋಪಾಲಸ್ವಾಮಿ, ಆರೂರು ಅನಂತಕೃಷ್ಣ ಶರ್ಮ ಇನ್ನಿತರರು ಕಾರ್ಯಕ್ರಮ ನೀಡಿದ್ದರು. ಯಕ್ಷಗಾನ – ತಾಳಮದ್ದಳೆ- 250
ಚಿಟ್ಟಾಣಿ ಯಕ್ಷಗಾನ ಸಪ್ತಾಹ, ಧಾರೇಶ್ವರ ಯಕ್ಷಗಾನ ಬಳಗದ ಸಪ್ತಾಹ, ಬಳ್ಕೂರು ಕೃಷ್ಣಯಾಜಿ ಯಕ್ಷಗಾನ ಬಳಗದ ಪಂಚಾಹ, ಯಕ್ಷ ಶಿಕ್ಷಣ ಟ್ರಸ್ಟ್, ಯಕ್ಷಗಾನ (ವೃತ್ತಿ¤ಪರರು ಮತ್ತು ಹವ್ಯಾಸಿ ಕಲಾವಿದರು), ಸಂಗೀತ-230, ನೃತ್ಯ6-220
ನಾಟಕ-ನೃತ್ಯ ನಾಟಕ-20, ಹರಿಕಥೆ-45, ಇನ್ನಿತರ ಸಂಕೀರ್ಣ ಕಾರ್ಯಕ್ರಮಗಳು-10 (ಬಿಲ್ಲು ವಿದ್ಯೆ, ಇಂದ್ರಜಾಲ) ಎರಡು ವರ್ಷದಲ್ಲಿ ಒಟ್ಟು ಸುಮಾರು 770ಕ್ಕೂ ಮಿಕ್ಕಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಸೂತ್ರವಾಗಿ ನಡೆಯಲ್ಪಟ್ಟು ಕಲಾಭಿಮಾನಿಗಳು, ಪ್ರೇಕ್ಷಕರು, ಧನ್ಯರಾದರು. ಎಸ್.ಜಿ. ನಾಯ್ಕ