ಮುಂಬಯಿ: ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಗಳವರ ಪರಮಾನುಗ್ರಹದಿಂದ ನ್ಯಾಯವಾದಿ ಪದ್ಮಾ ಆಚಾರ್ಯ ಇವರ ನೇತೃತ್ವದ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಲೆಯು ಆ. 4 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿರುವ ಯತಿ ಚಕ್ರವರ್ತಿ ವಿಶ್ವೇಶತೀರ್ಥ ಸಭಾಗೃಹದಲ್ಲಿ ನಡೆಯಿತು.
ತಾಳಮದ್ದಲೆ ಕಾರ್ಯಕ್ರಮವನ್ನು ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ಪ್ರಕಾಶ ಆಚಾರ್ಯ ರಾಮಕುಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ಮೋಹನ್ ಮಾರ್ನಾಡ್, ಪ್ರಕಾಶ್ ಶೆಟ್ಟಿ ಸುರತ್ಕಲ್, ಕರುಣಾಕರ್ ಶೆಟ್ಟಿ ಕುಕ್ಕುಂದೂರು ಹಾಗೂ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇದರ ಕಲಾವಿದೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ರಾಯಭಾರ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅಮೃತಾ ಅಡಿಗ, ಚೆಂಡೆ-ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ, ಅಪೂರ್ವಾ ಸುರತ್ಕಲ್ ಮೊದಲಾದವರು ಸಹಕರಿಸಿದರು. ಕಲಾವಿದರುಗಳಾಗಿ ಪದ್ಮಾ ಆಚಾರ್ಯ, ವೀಣಾ ತಂತ್ರಿ, ಸುಮಂಗಳಾ ರತ್ನಾಕರ, ಆಶಾಲತಾ ವಿ. ಕೆ., ಅಶ್ವಿನಿ ನಿಡ್ವಾಣ್ಣಾಯ ಮೊದಲಾದವರು ಪಾಲ್ಗೊಂಡಿದ್ದರು.
ಸಂಸ್ಥೆಯ ವತಿಯಿಂದ ಕಲಾವಿ ದರನ್ನು ಗೌರವಿಸಲಾಯಿತು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಲಾಭಿ ಮಾನಿಗಳು, ಭಕ್ತಾದಿಗಳು, ಕಲಾಪೋಷಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ತಂಡವು ಈಗಾಗಲೇ ಯಶಸ್ವಿ 4 ವರ್ಷಗಳನ್ನು ಪೂರೈಸಿ 5 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, 250 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಆ. 5 ರಂದು ಸಂಜೆ 5.30 ರಿಂದ ಘಾಟ್‌ಕೋಪರ್ ಅಸಲ್ಫಾದ ಗೀತಾಂಬಿಕಾ ಮಂದಿರದ ಸಭಾಂಗಣದಲ್ಲಿ ಕರ್ಣ ಪರ್ವ ತಾಳಮದ್ದಳೆ ನಡೆಯಲಿದೆ.
ಚಿತ್ರ-ವರದಿ : ರೊನಿಡಾ ಮುಂಬಯಿ