Advertisement

ಸಂಪರ್ಕ ಕಡಿತ ಭೀತಿಯಲ್ಲಿ ಪಾಜಪಳ್ಳ-ಕಲ್ಮಡ್ಕ ರಸ್ತೆ

09:39 AM Jun 16, 2019 | mahesh |

ಬೆಳ್ಳಾರೆ: ಬೆಳ್ಳಾರೆ ಸುಬ್ರಹ್ಮಣ್ಯ ರಸ್ತೆಯ ಪಾಜಪಳ್ಳದಿಂದ ಕಲ್ಮಡ್ಕ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಡಾಮರು ಎದ್ದು ಹೋಗಿ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಸಂಚಾರಕ್ಕೆ ಅಯೋಗ್ಯವಾಗಿರುವ ಈ ರಸ್ತೆಯ ಮೂಲಕ ಕಲ್ಮಡ್ಕ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

Advertisement

ಕಲ್ಮಡ್ಕ ಮೂಲಕ ಕುಕ್ಕುಜಡ್ಕ ಸಂಪರ್ಕಿಸುವ ರಸ್ತೆ ಇದಾಗಿದ್ದು, ಕಲ್ಮಡ್ಕ ಭಾಗದ ಜನ ಪುತ್ತೂರು, ಸುಬ್ರಹ್ಮಣ್ಯ ಮತ್ತು ಸುಳ್ಯ ಸಂಪರ್ಕಿಸಬೇಕಾದರೆ ಈ ರಸ್ತೆಯನ್ನು ಬಳಸುವುದು ಅನಿವಾರ್ಯವಾಗಿದೆ. ಆದರೆ ಹದಗೆಟ್ಟಿರುವ ರಸ್ತೆಯಿಂದ ಮಳೆಗಾಲದಲ್ಲಿ ಮತ್ತಷ್ಟು ತೊಂದರೆ ಎದುರಾಗಿದ್ದು, ಈ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿ ಪರಿಣಮಿಸಿದೆ.

9 ಸರಕಾರಿ ಬಸ್‌ ಓಡಾಟ
ಪಾಜಪಳ್ಳದಿಂದ ಈ ರಸ್ತೆ ಇಂದ್ರಾಜೆ ಮೂಲಕ ಹಾದು ಹೋಗಿ ಕಲ್ಮಡ್ಕ ಗ್ರಾಮದ ಮೂಲಕ ಕುಕ್ಕುಜಡ್ಕ ಸೇರಿಕೊಳ್ಳುತ್ತದೆ. ಈ ರಸ್ತೆ ಹಾದು ಹೋಗುವಲ್ಲಿ ಕಲ್ಮಡ್ಕ ಮತ್ತು ಅಮರಪಟ್ನೂರು ಗ್ರಾಮದ ನೂರಾರು ಮನೆಗಳಿವೆ. ನೂರಾರು ವಿದ್ಯಾರ್ಥಿಗಳು ಕಲ್ಮಡ್ಕ ಮತ್ತು ಕುಕ್ಕುಜಡ್ಕದಿಂದ ಈ ರಸ್ತೆಯಾಗಿ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಪ್ರತಿದಿನ ಈ ರಸ್ತೆಯಲ್ಲಿ 9 ಸರಕಾರಿ ಬಸ್‌ಗಳು ಓಡಾಟ ನಡೆಸುತ್ತಿವೆ. ಈ ಭಾಗದ ಜನರಿಗೆ ತಾಲೂಕು ಕೇಂದ್ರವಾದ ಸುಳ್ಯ ತಲುಪಲು ಈ ರಸ್ತೆ ಸಹಕಾರಿಯಾಗಿದೆ.

ಡಾಮರು ರಸ್ತೆ ಮಧ್ಯೆ ಹಲವೆಡೆ ದೊಡ್ಡ ಹೊಂಡ ನಿರ್ಮಾಣವಾಗಿದೆ. ಇನ್ನೂ ಹಲವೆಡೆ ಡಾಮರು ಎದ್ದು ಹೋಗಿ ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿ ಕೆಸರುಮಯವಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮರುಡಾಮರು ಕಾಮಗಾರಿ ನಡೆದಿದ್ದು, ಈ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗಿ ಈ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next