Advertisement

ಸುಣ್ಣಬಣ್ಣ ಭಾಗ್ಯ ಕಂಡ ಮೇಲ್ಮಟ್ಟದ ಟ್ಯಾಂಕ್‌

02:36 PM Sep 30, 2020 | Suhan S |

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದಲ್ಲಿ ಸುಮಾರು 30 ವರ್ಷಗಳ ಹಿಂದೆ ಕುಡಿಯಲು ನೀರು ಸಂಗ್ರಹಿಸಲು ನಿರ್ಮಿಸಿರುವ 10 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಟ್ಯಾಂಕ್‌ಗೆ ಸುಣ್ಣಬಣ್ಣದ ಭಾಗ್ಯಕೂಡಿ ಬಂದಿದೆ.

Advertisement

ಶಿಡ್ಲಘಟ್ಟ ನಗರದ 17 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮಾಜಿ ಸಿಎಂ ದಿ.ಎಸ್‌.ಆರ್‌.ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್‌ ಇತ್ತೀಚಿಗೆ ಸೋರಿಕೆಯಾಗುತಿತ್ತು. ಜೊತೆಗೆ ಸುಣ್ಣಬಣ್ಣವಿಲ್ಲದೇ ವಿಕಾರವಾಗಿ ಕಾಣುತ್ತಿದ್ದ ಬೃಹತ್‌ ಗಾತ್ರದ ಮೇಲ್ಮಟ್ಟದ ನೀರಿನ ಟ್ಯಾಂಕ್‌ ನ್ನು ಸುಣ್ಣಬಣ್ಣದಿಂದ ಕಂಗೊಳಿಸಿ ಹೊಸ ರೂಪ ನೀಡಲಾಗಿದೆ.

ಶಿಡ್ಲಘಟ್ಟ ನಗರದಲ್ಲಿ 1, 2, 3ನೇ ಕಾರ್ಮಿಕ ನಗರ,1,2ನೇ ಟಿಎಂಸಿ ಬಡಾವಣೆ, ಆಝಾದ್‌ ನಗರ, ಗಾಂಧಿನಗರ, ಸಂತೋಷನಗರ, ರಹಮತ್‌ ನಗರ ಸೇರಿದಂತೆ 17 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮೇಲ್ಮ ಟ್ಟದ ಟ್ಯಾಂಕ್‌ ಆವರಣದಲ್ಲಿ ನೀರಿನ ಕಾರಂಜಿ ನಿರ್ಮಿಸಲಾಗಿತ್ತು. ಆದರೆ ಕಾಲಕ್ರಮೇಣ ನಿರ್ವಹಣೆ ಕೊರತೆಯಿಂದ ನೀರಿನ ಕಾರಂಜಿ ಹಾಳಾಗಿ ಇದೀಗ ಕೇವಲ ಮೇಲ್ಮಟ್ಟದ ಟ್ಯಾಂಕ್‌ ಉಳಿದುಕೊಂಡಿದೆ.

ಟ್ಯಾಂಕ್‌ಗೆ ಹಲವು ವರ್ಷಗಳ ಬಳಿಕ ಅಭಿವೃದ್ಧಿ ಭ್ಯಾಗ್ಯಕಂಡು ಬಂದಿದೆ. ಆದರೆ ಟ್ಯಾಂಕಿನ ಕೆಳಗೆ ನಿರುಪಯುಕ್ತ ಗಿಡಗಂಟಿಗಳು ಬೆಳೆದಿದ್ದು, ವಿಷಜಂತುಗಳಿಗೆ ಆಶ್ರಯತಾಣವಾಗಿದೆ ಪರಿವರ್ತನೆಗೊಂಡಿದೆ. ಅಕ್ರಮ ಚಟುವಟಿಕೆ ತಾಣ: ಮೇಲ್ಮಟ್ಟದ ಟ್ಯಾಂಕ್‌ಗೆ ಗೇಟ್‌ ಅಳವಡಿಸಲಾಗಿದೆ. ಅದಕ್ಕೆ ಬೀಗ ಇಲ್ಲದೇ ಪುಂಡಪೋಕರಿಗೆ ಬೀಡಿ- ಸಿಗರೇಟ್‌, ಪಾನ್‌ಪರಾಗ್‌ ಗುಟ್ಕಾ ಸೇರಿದಂತೆ ಮದ್ಯ ಸೇವನೆಗೆ ಅಡ್ಡೆ ಮಾಡಿಕೊಂಡಿದ್ದು, ನಗರಸಭೆ ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಪುಂಡಪೋಕರಿಗಳು ಟ್ಯಾಂಕ್‌ ಒಳಗೆ ಪ್ರವೇಶಿಸದಂತೆ ಕಠಿಣ ಕ್ರಮ ಜರುಗಿಸಬೇಕಾಗಿದೆ.

ಶಿಡ್ಲಘಟ್ಟ ನಗರದ 1ನೇ ಟಿಎಂಸಿ ಬಡಾವಣೆ,ಕೋಟೆ ವೃತ್ತ ಹಾಗೂ ಹೆಲ್ತ್‌  ಕಾಲೋನಿಯಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್‌ಗಳನ್ನು2019-20ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ 5.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಟ್ಯಾಂಕ್‌ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಶ್ರೀನಿವಾಸ್‌, ಪೌರಾಯುಕ್ತ,

Advertisement

ಶಿಡ್ಲಘಟ್ಟ ನಗರದ ಹೊಸ ಪ್ರದೇಶದ 12 ವಾರ್ಡ್‌ಗಳು ಮತ್ತು ಹಳೆ ನಗರದ ವಾರ್ಡ್‌ ಸಂಖ್ಯೆ 23,10,11,15,29 ವಾರ್ಡ್‌ಗಳಿಗೆ ಮೇಲ್ಮಟ್ಟದ ಟ್ಯಾಂಕ್‌ ನಿರ್ಮಿಸಲಾಗಿದೆ. ಸುಮಾರು ವರ್ಷಗಳ ನಂತರ ಟ್ಯಾಂಕ್‌ನ್ನು ಸುಣ್ಣಬಣ್ಣದಿಂದ ಕಂಗೊಳಿಸಲಾಗುತ್ತಿದೆ. ಮುರಳಿ, ನೀರು ಸರಬರಾಜು ವಿಭಾಗ ನಗರಸಭೆ ಶಿಡ್ಲಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next