Advertisement

ವಿಚಾರ ಶಕ್ತಿ ಹೆಚ್ಚಿಸುತ್ತದೆ ಚಿತ್ರಕಲೆ

09:42 AM Oct 31, 2021 | Team Udayavani |

ಕಲಬುರಗಿ: ಚಿತ್ರಕಲೆ ವಿಚಾರ ಶಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿಗೆ ಸಮಾಧಾನ ಮತ್ತು ನೆಮ್ಮದಿ ನೀಡುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ|ನಿರಂಜನ್‌ ವಿ. ನಿಷ್ಠಿ ಹೇಳಿದರು.

Advertisement

ಶರಣಬಸವ ವಿಶ್ವವಿದ್ಯಾಲಯದ ಸಾತ್ನಕೋತ್ತರ ಚಿತ್ರಕಲಾ ವಿಭಾಗದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರಿಗೆ ಚಿತ್ರಕಲೆ, ಸಂಗೀತ ಪ್ರಿಯವಾದ ವಿಷಯಗಳು. ಈ ಕುರಿತು ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಡಾ| ಅಪ್ಪ, ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವ ಆಶೀರ್ವಾದದಿಂದ ಶರಣಬಸವ ವಿಶ್ವ ವಿದ್ಯಾಲಯದ ಚಿತ್ರಕಲಾ ವಿಭಾಗ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಮ ಕುಲಪತಿ ಪ್ರೊ| ವಿ.ಡಿ. ಮೈತ್ರಿ ಮಾತನಾಡಿ, ಚಿತ್ರಕಲೆ ಮತ್ತು ವಾಸ್ತು ಶಿಲ್ಪಕಲೆಗೆ ಅವಿನಾಭಾವ ಸಂಭಂಧವಿದೆ. ವಿದ್ಯಾರ್ಥಿಗಳು ಚಿತ್ರಕಲೆ ವಿಷಯ ಆಯ್ದುಕೊಳ್ಳುವುದರಿಂದ ಅವರಲ್ಲಿ ಸೃಜನಶೀಲತೆ ಬೆಳೆಯುತ್ತದೆ ಎಂದು ಹೇಳಿದರು.

ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಡೀನ್‌ ಡಾ| ಶಾಂತಲಾ ನಿಷ್ಠಿ ಅಧ್ಯಕ್ಷೀಯ ಭಾಷಣ ಮಾಡಿ, ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವಿದೆ. ಚಿತ್ರಕಲೆಗಳ ಜೊತೆಗೆ ಕರಕುಶಲ ವಸ್ತು ತಯಾರಿಸುವ ಜಾಣ್ಮೆ ಹೊಂದಬೇಕು ಎಂದರು.

ಇದನ್ನೂ ಓದಿ: ಸರ್ಕಾರಿ ಯೋಜನೆ ಜನರಿಗೆ ತಲುಪಿಸಿ

Advertisement

ಶರಣಬಸವ ವಿವಿ ಪ್ರಾಧ್ಯಾಪಕರು, ಸಿಬ್ಬಂದಿ ಪಾಲ್ಗೊಂಡಿದ್ದರು. ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ ನೀಡಲಾಯಿತು. ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಚೇರ್‌ ಪರ್ಸನ್‌ ಡಾ| ಸುಬ್ಬಯ್ಯ ಎಂ. ನೀಲಾ ಮಾತನಾಡಿದರು. ವಿದ್ಯಾರ್ಥಿಗಳಾದ ಮಹಾಲಕ್ಷ್ಮೀ, ಅರ್ಪಿತಾ ನಿರೂಪಿಸಿದರು. ಪ್ರೊ| ಗಾಯಿತ್ರಿ ಕಲ್ಯಾಣಿ ಸ್ವಾಗತಿಸಿದರು, ಪ್ರೊ| ಸರಸ್ವತಿ ರೆಶ್ಮಿ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next