Advertisement

ಪೈಲ್ವಾನ್‌ ಹಾಡು-ಹಬ್ಬ

11:59 PM Aug 22, 2019 | mahesh |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಪೈಲ್ವಾನ್‌’ ಚಿತ್ರದ ಆಡಿಯೋ ಬಿಡುಗಡೆ ಚಿತ್ರದುರ್ಗದಲ್ಲಿ ನಡೆಯಬೇಕಿತ್ತು. ಎರಡೆರಡು ಬಾರಿ ದಿನಾಂಕ
ಪ್ರಕಟಿಸಲಾಗಿಯೂ, ಅಲ್ಲಿ ಆಡಿಯೋ ರಿಲೀಸ್‌ ಮಾಡಲಾಗಲಿಲ್ಲ. ಒಂದು ಕಡೆ ಮಳೆ, ನೆರೆಯ ನಡುವೆ ಸಂಭ್ರಮಿಸೋದು ಸರಿಯಲ್ಲ ಎಂಬ ಕಾರಣಕ್ಕೆ
ಚಿತ್ರತಂಡ, ಆಡಿಯೋ ಬಿಡುಗಡೆಯನ್ನು ಬೆಂಗಳೂರಿನಲ್ಲಿ ಮಾಡಿತು.

Advertisement

ಸುದೀಪ್‌ ನಾಯಕರಾಗಿರುವ ಈ ಚಿತ್ರದ ಆಡಿಯೋ ಬಿಡುಗಡೆಗೆ ಪುನೀತ್‌ ರಾಜಕುಮಾರ್‌ ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದರು. ಸುದೀಪ್‌ ಹಾಗೂ ಪುನೀತ್‌ ವೇದಿಕೆ ಮೇಲೇರುತ್ತಿದ್ದಂತೆ ಅಭಿಮಾನಿಗಳ
ಹರ್ಷ ಮುಗಿಲು ಮುಟ್ಟಿತು. ಈ ಚಿತ್ರವನ್ನು ಕೃಷ್ಣ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುದೀಪ್‌ ಕುಸಿ ಜೊತೆಗೆ ಬಾಕ್ಸಿಂಕ್‌ ಕೂಡಾ ಮಾಡಿದ್ದು, ಬಾಲಿವುಡ್‌ನ‌ ಖ್ಯಾತ ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ.

ಆಡಿಯೋ ರಿಲೀಸ್‌ನಲ್ಲೂ ಸುದೀಪ್‌, ಪುನೀತ್‌ ಹಾಗೂ ಗಣೇಶ್‌ ಆಚಾರ್ಯ ನೃತ್ಯ ಮಾಡಿ ರಂಜಿಸಿದರು. ಗಾಯಕ ವಿಜಯ್‌ ಪ್ರಕಾಶ್‌ ಚಿತ್ರದ ಹಾಡನ್ನು ಹಾಡಿ, ಸ್ಟೆಪ್‌ ಹಾಕಿ ರಂಜಿಸಿದರೆ, ನಾಯಕಿ ಆಕಾಂಕ್ಷಾ ಸಿಂಗ್‌ ಕೂಡಾ
ಸಖತ್ತಾಗಿಯೇ ಎಂಟ್ರಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next