Advertisement

“ಪೈಲ್ವಾನ್‌’ಚಿತ್ರ ಲಿಂಕ್‌ ಕದ್ದಿದ ಆರೋಪಿ ಬಂಧನ

01:03 AM Sep 21, 2019 | Lakshmi GovindaRaju |

ಬೆಂಗಳೂರು: ನಟ ಸುದೀಪ್‌ ನಾಯಕ ನಟನಾಗಿ ನಟಿಸಿರುವ “ಪೈಲ್ವಾನ್‌’ ಸಿನಿಮಾದ ಲಿಂಕ್‌ನನ್ನು ತನ್ನ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿ ಸ್ನೇಹಿತರಿಗೆ ಲಿಂಕ್‌ ಕಳುಹಿಸಿಕೊಟ್ಟ ಆರೋಪಿಯನ್ನು ನಗರ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Advertisement

ರಾಕೇಶ್‌ ಎಲ್‌. ಬಂಧಿತ ಆರೋಪಿ. ಕಾಪಿರೈಟ್‌ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗೆ ಚಿತ್ರದ ಲಿಂಕ್‌ ಎಲ್ಲಿಂದ ಸಿಕ್ಕಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಟಿಎ ಮುಗಿಸಿರುವ ರಾಕೇಶ್‌, ಸೆ.12ರಂದು ಬಿಡುಗಡೆಯಾದ ಪೈಲ್ವಾನ್‌ ಪೂರ್ತಿ ಸಿನಿಮಾದ ಲಿಂಕ್‌ ಅನ್ನು ಅದೇ ದಿನ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿ, ಸ್ನೇಹಿತರು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದ. ಜತೆಗೆ ತನ್ನ ಇಬ್ಬರು ಸ್ನೇಹಿತರಿಗೆ ಲಿಂಕ್‌ ಕಳುಹಿಸಿಕೊಟ್ಟಿದ್ದ. ಅಲ್ಲದೇ ಚಿತ್ರದ ಲಿಂಕ್‌ ಬೇಕಿದ್ದರೆ ಮೆಸೆಂಜರ್‌ ಮೂಲಕ ಸಂಪರ್ಕಿಸುವಂತೆಯೂ ಬರೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಲ್ವಾನ್‌ ಚಿತ್ರದ ಲಿಂಕ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿ ಕಾಪಿರೈಟ್‌ ಉಲ್ಲಂಘನೆ ಹಗೂ ಚಿತ್ರಕ್ಕೆ ನಷ್ಟವುಂಟು ಮಾಡಿದ ಬಗ್ಗೆ ಚಿತ್ರದ ನಿರ್ಮಾಪಕರು ನೀಡಿದ ದೂರಿನ ಆಧಾರದಲ್ಲಿ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್‌ ಯಶವಂತ್‌ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next