Advertisement
ಮಲ್ಟಿಬ್ರಾಂಡ್ ಮತ್ತು ಫರ್ನಿಚರ್ ಉತ್ಪನ್ನಗಳು ಒಂದೇ ಕಡೆ ಮಾರಾಟಕ್ಕೆ ಲಭ್ಯವಿರುವ ಪೈ ಇಂಟರ್‌ನ್ಯಾಷನಲ್ ಮಳಿಗೆ ಇದಾಗಿದೆ. ನಾಲ್ಕು ಮಹಡಿಯ ಏಕ ಕಟ್ಟಡದಲ್ಲಿ ಈ ಮಳಿಗೆ ಇದ್ದು, ಮೊದಲೆರಡು ಮಹಡಿಯಲ್ಲಿ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು, ಉಳಿದ ಎರಡು ಮಹಡಿಯಲ್ಲಿ ಅತ್ಯಾಕರ್ಷಕ ವಿನೂತನ ಮಾದರಿಯ ದೇಶಿ-ವಿದೇಶಿ ಪೀಠೊಪಕರಣಗಳು ಮಾರಾಟ ಮಾಡಲಾಗುತ್ತಿದೆ.
Related Articles
Advertisement
ಸಂಸ್ಥೆಗೆ ಗ್ರಾಹಕರ ಹಿತವೇ ಮುಖ್ಯವಾಗಿದ್ದು, ಹೀಗಾಗಿಯೇ ನೂರಕ್ಕೆ ನೂರು ಗುಣಮಟ್ಟದ ಉತ್ಪನ್ನಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. ಸಂಸ್ಥೆ 2018 – 19ನೇ ಸಾಲಿನಲ್ಲಿ 1,400 ಕೋಟಿ ರೂ. ವಹಿವಾಟು ನಡೆಸಿದ್ದು, ಪ್ರಸ್ತಕ ಸಾಲಿನಲ್ಲಿ ವಹಿವಾಟನ್ನು 2,500 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ ಸರ್ವೀಸ್: ಇಂದು ಕೆಲ ಎಲೆಕ್ಟ್ರಾನಿಕ್ ಕಂಪನಿಗಳು ಸರ್ವೀಸ್ ಹೆಸರಿನಲ್ಲಿ ಗ್ರಾಹಕರಿಂದ ಸಾಕಷ್ಟು ಹಣ ಪಡೆಯುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿಯೇ ನಮ್ಮ ಸಂಸ್ಥೆಯ ವತಿಯಿಂದ ಸರ್ವಿಸ್ ವಿಭಾಗ ಆರಂಭಿಸಲಾಗುವುದು. ಜತೆಗೆ ಒಂದು ಸಹಾಯವಾಣಿ ಆರಂಭಿಸಿ ಕರೆ ಮಾಡಿದ ಕೂಡಲೇ ಗ್ರಾಹಕರಿಗೆ ಶೀಘ್ರದಲ್ಲೆ ಸೇವೆ ಸಿಗಲಿದೆ ಎಂದು ರಾಜ್‌ಕುಮಾರ್ ಪೈ ತಿಳಿಸಿದರು.
ಮಾನ್ಸೂನ್ ಸೂಪರ್ ಸೇಲ್: ಸದ್ಯ ಪೈ ಇಂಟರ್‌ನ್ಯಾಷನಲ್ ಮಳಿಗೆಗಳಲ್ಲಿ ಮಾನ್ಸೂನ್ ಸೂಪರ್ ಸೇಲ್ ನಡೆಯುತ್ತಿದ್ದು, ಗ್ರಾಹಕರಿಗಾಗಿಯೇ 4 ಕೋಟಿ. ರೂ ಬಹುಮಾನ ಇಡಲಾಗಿದೆ. ಮುಂದಿನ ಮೂರು ತಿಂಗಳ ಕಾಲ ಪೈ ಮಳಿಗೆಯಲ್ಲಿ 2000 ರೂ. ಹಾಗೂ ಅದಕ್ಕೂ ಹೆಚ್ಚಿನ ಮೌಲ್ಯದ ಖರೀದಿ ಮಾಡುವ ಗ್ರಾಹಕರಿಗೆ ಬಹುಮಾನದ ಕೂಪನ್ ಲಭ್ಯವಾಗಲಿದೆ. ಸೂಪರ್ ಸೇಲ್ ಮುಗಿದ ಬಳಿಕ ಅಂತಿಮವಾಗಿ ಲಕ್ಕಿ ಡ್ರಾ ನಡೆಸಿ, ಅದೃಷ್ಟಶಾಲಿ ಗ್ರಾಹಕರಿಗೆ 50 ಸಾವಿರ ರೂ. ಮೌಲ್ಯದ ಉತ್ಪನ್ನ ಖರೀದಿ ಅವಕಾಶ ಸೇರಿದಂತೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದು ಪೈ ಇಂಟರ್‌ನ್ಯಾಷನಲ್‌ನ ಹಣಕಾಸು ವಿಭಾಗದ ಮುಖ್ಯಸ್ಥರು ತಿಳಿಸಿದರು.
ಆಕರ್ಷಕ ಪೀಠೊಪಕರಣಗಳು: ಈ ಹೊಸ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ಮರಗಳಿಂದ ತಯಾರಿಸಿದ ಡೈನಿಂಗ್ ಹಾಗೂ ಕಾಫಿ ಟೇಬಲ್, ಕುರ್ಚಿ, ಹಾಸಿಗೆ, ಮಂಚ ಸೇರಿದಂತೆ ವಿವಿಧ ಪೀಠೊಪಕರಣಗಳು ಲಭ್ಯವಿವೆ. ದೇಶಿ, ವಿದೇಶಿ ಹಾಗೂ ಎಲ್ಲಾ ಮಾದರಿಯ ಬ್ರಾಂಡೆಡ್ ಪೀಠೊಪಕರಣಗಳು ಇಲ್ಲಿ ದೊರೆಯುತ್ತವೆ. ವಿಶೇಷ ಕುಶನರಿ ಸೋಫಾಗಳು, ಮಲೇಶಿಯನ್ ಪೀಠೊಪಕರಣಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಈ ಎಲ್ಲಾ ಉತ್ಪನ್ನಗಳನ್ನು ಮಧ್ಯಮ ವರ್ಗದ ಗ್ರಾಹಕರಿಗೆಂದೇ ಪೈ ವಿಶೇಷ ಬೆಲೆಯಲ್ಲಿ ನೀಡುತ್ತಿದೆ.
ವ್ಯಾಪಾರ ವಹಿವಾಟಿನೊಂದಿಗೆ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಹಿರಿಯ ಜೀವಿಗಳ ಆಶ್ರಯಕ್ಕಾಗಿ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪರಿಸರ ಸಂರಕ್ಷಣೆ ಉದ್ದೇಶದಿಂದ ನಾಡಿನಾದ್ಯಂತ ಒಂದು ಕೋಟಿ ಸಸಿ ನೆಡುವ ಆಶಯವನ್ನು ಪೈ ಸಂಸ್ಥೆ ಹೊಂದಿದ್ದು, ಮುಂದಿನ ದಿಗಳಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಿದ್ದೇವೆ.-ರಾಜ್‌ಕುಮಾರ್ ಪೈ, ಪೈ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ