Advertisement

Padupanambur: ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆ

04:55 PM Jul 19, 2023 | Team Udayavani |

ಹಳೆಯಂಗಡಿ: ಇಲ್ಲಿನ ಪಡುಪಣಂಬೂರು ಬಳಿಯ ಮನೆಯೊಂದರ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವವೊಂದು ಪತ್ತೆಯಾದ ಘಟನೆ ಜು.19ರಂದ ಬೆಳಕಿಗೆ ಬಂದಿದೆ.

Advertisement

ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಇದು ಸ್ಥಳೀಯ ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ (85) ಎಂಬುವರದ್ದೆಂದು ಗುರತಿಸಲಾಗಿದೆ.

ಇವರ ಕಳೆದ ಕೆಲವು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಮನೆಯ ಮಾಲೀಕರು ಮುಂಬೈಯಲ್ಲಿದ್ದು ಮನೆಯಲ್ಲಿ ಆಗಾಗ ಬಂದು ಹೋಗುತ್ತಿದ್ದರು. ಸ್ಥಳೀಯವಾಗಿ ವಿಪರೀತ ವಾಸನೆ ಇದ್ದುದರಿಂದ ಸಂಶಯಗೊಂಡು ಪೊಲೀಸರ ಮೂಲಕ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next