Advertisement

ಪಡುಕೆರೆ ಕಾಲೇಜು: ಮತದಾನ ಜಾಗೃತಿ

01:00 AM Mar 07, 2019 | Team Udayavani |

ಕೋಟ: ಲಕ್ಷ್ಮೀಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಸ್ವೀಪ್‌ ಚಟುವಟಿಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Advertisement

ಕಾಲೇಜಿಗೆ ಭೇಟಿ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಡಾ| ಎಸ್‌.ಎಸ್‌. ಮಧುಕೇಶ್ವರ್‌, ವಿದ್ಯಾರ್ಥಿಗಳಿಗೆ ಮತದಾನದ ಪ್ರಾಮುಖ್ಯತೆ ತಿಳಿಸಿದರು ಹಾಗೂ ಎಲ್ಲರೂ ಮತದಾನ ಮಾಡುವಂತೆ  ತಿಳಿಸಿದರು.

ಕುಂದಾಪುರದ  ಸ್ವೀಪ್‌ ಸಂಪಕಾರ್ಧಿಕಾರಿ ಪ್ರಕಾಶ್‌ಚಂದ್ರ ಶೆಟ್ಟಿ, ಚುನಾವಣಾ ವಲಯಾಧಿಕಾರಿ ಕುಸುಮಾಕರ ಶೆಟ್ಟಿ ಹಾಗೂ ಕೋಟ ಕಂದಾಯ ಪರಿವೀಕ್ಷಕರು ಚಂದ್ರಹಾಸ ಬಂಗೇರ ಉಪಸ್ಥಿತರಿದ್ದು ಮತದಾನದ ಮಹತ್ವ ಕುರಿತು ಮಾತನಾಡಿದರು.

ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಶಿಕ್ಷಿತರಾದ ಯುವಜನಾಂಗ ಈ ದೇಶದ ಭವಿಷ್ಯದ ಕುರಿತು ಅವಲೋಕಿಸುವ ಹಾಗೂ ನಾಯಕತ್ವದ ಕುರಿತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುತ್ತದೆ. ಆದ್ದರಿಂ ಯುವಜನತೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್‌ ಸಂಚಾಲಕರಾದ ಪ್ರಶಾಂತ್‌ ನೀಲಾವರ ಕಾಲೇಜಿನಲ್ಲಿ ಸ್ವೀಪ್‌ ಚಟುವಟಿಕೆ  ಹಾಗೂ ಮತದಾರರ ಪಟ್ಟಿಯಲ್ಲಿ ನೂತನವಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಅಂಕಿ-ಅಂಶ ವಿವರಣೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next