ಪಡುಬಿದ್ರಿ: ಭಾರತ ಸರಕಾರ ಸ್ವಾಮ್ಯದ ಪಡುಬಿದ್ರಿಯ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿನ ಅಡುಗೆ ಅನಿಲ ಪೂರೈಕೆಯಲ್ಲಿ ತಾತ್ಕಾಲಿಕ ವಿಳಂಬವಾಗುತ್ತಿದ್ದು, ಸುಮಾರು 20 ದಿನಗಳಿಂದಲೂ ತಮ್ಮ ಗ್ಯಾಸ್ ಬುಕ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಕಾದು ಕಾದು ಸುಸ್ತಾಗಿರುವ ಗ್ರಾಹಕರು ಇಂದು ಪಡುಬಿದ್ರಿಯ ತಮ್ಮ ಏಜೆನ್ಸಿ ಎದುರು ಜಮಾಯಿಸಿದ್ದರು.
ಇವರಿಗೀಗ ತಾತ್ಕಾಲಿಕ ನೆಲೆಯಲ್ಲಿ ಬೆಳ್ಮಣ್‌ನ ಭಾರತ್ ಗ್ಯಾಸ್ ಏಜೆನ್ಸಿ ಮೂಲಕವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ಪ್ರತಿದಿನವೂ ಸುಮಾರು 150ರಷ್ಟು ಸಿಲಿಂಡರ್‌ಗಳ ಪೂರೈಕೆಯಾಗುತ್ತಿದೆ.
ಈ ಕುರಿತಾಗಿ ಭಾರತ್ ಗ್ಯಾಸ್‌ನ ಮಾರುಕಟ್ಟೆ ಅಧಿಕಾರಿ ಅರುಣ್ ಮೋಹನ್‌ರನ್ನು “ಉದಯವಾಣಿ’ ಸಂಪರ್ಕಿಸಿದಾಗ ಸದ್ಯ ಅವರಿಗೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಏಜೆನ್ಸಿಗೆ ವಿಧಿಸಲಾಗಿರುವ ದಂಡನಾ ಮೊತ್ತವು ಪಾವತಿಯಾದ ಬಳಿಕ ಸಿಲಿಂಡರ್‌ಗಳ ಪೂರೈಕೆ ಯಥಾಸ್ಥಿತಿಗೆ ಬರಲಿದೆ. ಬೆಳ್ಮಣ್ ಏಜೆನ್ಸಿ ಮೂಲಕ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಆಗುತ್ತಿದೆ. ಅವರಿಗೆ ತೊಂದರೆಯಾಗದು. ಯಾವ ಕಾರಣಕ್ಕಾಗಿ ಎಷ್ಟು ದಂಡನಾ ಮೊತ್ತವನ್ನು ವಿಧಿಸಲಾಗಿದೆ ಎನ್ನುವ ಕುರಿತಾಗಿ ಪ್ರಶ್ನಿಸಿದಾಗ ಅಧಿಕಾರಿ ಅದನ್ನು ತಾನು ತಿಳಿಸುವಂತಿಲ್ಲ ಎಂದಿದ್ದಾರೆ.
ಪಡುಬಿದ್ರಿಯ ಏಜೆನ್ಸಿಯ ಪ್ರತಿನಿಧಿ ಲಕ್ಷಿ$¾àನಾರಾಯಣ್ ಅವರನ್ನು ಕೇಳಿದಾಗ ಸದ್ಯ ಬೆಳ್ಮಣ್‌ನಿಂದ ಸಿಲಿಂಡರ್‌ಗಳನ್ನು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ. ತಮಗೆ ವಿಧಿಸಲಾದ ದಂಡನಾ ಮೊತ್ತದ ಪಾವತಿಯ ಬಳಿಕ ಪರಿಸ್ಥಿತಿ ತಿಳಿಯಾಗಲಿದೆ ಎಂದಿದ್ದಾರೆ.