Advertisement

ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’

07:58 PM Jun 28, 2022 | Team Udayavani |

ಪಡುಬಿದ್ರಿ: ವರ್ಷಗಳ ಹಿಂದೆಯೇ ಹೆದ್ದಾರಿ ಚತುಃಷ್ಪಥದ ಮಧ್ಯೆ ನೆಲೆಗೊಳಿಸಲಾಗಿದ್ದ ವಿದ್ಯುತ್‌ ದೀಪಗಳಿಗೆ ಕೊನೆಗೂ ಮೋಕ್ಷ ದೊರೆತು  ಮಂಗಳವಾರದಿಂದ ಅರೆಬರೆಯಾಗಿ ಉರಿಯಲಾರಂಭಿಸಿದೆ.

Advertisement

ಹೆದ್ದಾರಿ ಕಾಮಗಾರಿಯು 90 ಶೇಕಡಾ ಪೂರ್ಣವಾದಾಗಲೇ ಕಳೆದ ಮೇ 15 ರೊಳಗಾಗಿ ದೀಪಗಳು ಉರಿಯಲಿವೆ ಎಂದು ನವಯುಗ ಕಂಪೆನಿ ಅಧಿಕಾರಿ ಪಂಚಾಯತ್ ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಹೇಳಿದ್ದರು. ಅದು ಈಗಷ್ಟೇ ಜೂನ್ ಅಂತ್ಯದಲ್ಲಿ ನಿಜವಾಗಿದೆ.

ಆದರೂ ಇಂದು ಕೆಲವೇ ದೀಪಗಳು ಉರಿದಿವೆ. ಹಲವಾರು ಬಲ್ಬ್ ಗಳು ವರ್ಷದಷ್ಟು ಹಳೆಯದಾಗಿ ಹಾಳಾಗಿರುವುದರಿಂದ ಇಂದು ಉರಿದಿರಲಿಲ್ಲ.

ನವಯುಗ ಮೆಸ್ಕಾಂ ಬಿಲ್ ಬಾಕಿಯೂ ಹೆದ್ದಾರಿ ದೀಪ ಬೆಳಗಲು ಆದ ವಿಳಂಬಕ್ಕೆ ಇನ್ನೊಂದು ಪರೋಕ್ಷ ಕಾರಣವೆನಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next