ಪಡುಬಿದ್ರಿ: ರಾಜ್ಯ ಹೆದ್ದಾರಿ 1ರ ಪ್ರಸ್ತಾವಿತ ಕಂಚಿನಡ್ಕ ಟೋಲ್‌ಗೇಟ್ ಕಾರ್ಯಗತವಾಗದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ.
ಗುರುವಾರ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗಮಧ್ಯೆ ಕಂಚಿನಡ್ಕದಲ್ಲಿ ಪಡುಬಿದ್ರಿ – ಬೆಳ್ಮಣ್ -ಕಾರ್ಕಳ ಟೋಲ್ ವಿರೋಧಿ ಹೋರಾಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ಸಚಿವರು ಭಾಗವಹಿಸಿ ಈ ಭರವಸೆ ನೀಡಿದ್ದಾರೆ.
ಕೇವಲ 4 ಕಿ.ಮೀ. ದೂರದಲ್ಲಿ ಹೆಜಮಾಡಿ ಟೋಲ್‌ಗೇಟ್ ಇರುವ ಕಾರಣ ಇನ್ನೊಂದು ಟೋಲ್‌ಗೇಟ್ ಜನತೆಗೆ ಹೊರೆಯಾಗಲಿದೆ. ಸ್ವತಃ ಇಲ್ಲಿನ ಜನತೆಯ ಪರವಹಿಸಿ ಲೋಕೋಪಯೋಗಿ ಇಲಾಖೆ ಸಚಿವರಲ್ಲಿ ಮಾತನಾಡಿ ಈ ಪ್ರಸ್ತಾವನೆಯನ್ನು ರದ್ದುಗೊಳಿಸಲು ಪ್ರಯತ್ನಿಸುವುದಾಗಿ ಸಚಿವರು ಹೇಳಿದರು.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಆ. 24ರ ಸಾರ್ವಜನಿಕ ಪ್ರತಿಭಟನೆಯ ಕಾವು ಏರುತ್ತಿದೆ. ಪಡುಬಿದ್ರಿಯಿಂದ ಕಾರ್ಕಳದವರೆಗಿನ ಸುಮಾರು 40 ಗ್ರಾಮಗಳ ಜನರಿಗೆ ಕಿರಿಕಿರಿಯಾಗುವ ಕಂಚಿನಡ್ಕ ಟೋಲ್‌ಗೇಟ್ ಬೇಡವೇ ಬೇಡ ಎಂದರು.
ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಅವರು, ಸಮಿತಿ ಸಿದ್ಧಪಡಿ ಸಿದ ಮನವಿಯೊಂದನ್ನು ಸಚಿವೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಎಸ್‌ಪಿ ಡಾ| ಅರುಣ್ ಕುಮಾರ್, ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಲಕ್ಷ್ಮಣ ಶೆಟ್ಟಿ ಅರಂತಡೆ, ಪ್ರಸಾದ್‌ರಾಜ್ ಕಾಂಚನ್ ಮತ್ತಿತರರಿದ್ದರು.