Advertisement

ಪಡುಬಿದ್ರಿ: ಅಧಿಕಾರ ಸ್ಥಾಪನೆಯ ತಿಕ್ಕಾಟ…ಜಾರಂದಾಯ ದೈವದ ನೇಮಕ್ಕೆ ತಡೆ

12:35 AM Jan 08, 2023 | Team Udayavani |

ಪಡುಬಿದ್ರಿ: ಪಡುಹಿತ್ಲು ಜಾರಂದಾಯ ದೈವಸ್ಥಾನದ ಮೇಲೆ ಅಧಿಕಾರ ಸ್ಥಾಪನೆಯ ಸಲುವಾಗಿ ನಡೆಯುತ್ತಿರುವ ಎರಡು ಬಣಗಳ ತಿಕ್ಕಾಟವು ನ್ಯಾಯಾಲಯದ ಮೆಟ್ಟಿಲೇರಿದ್ದು ವಿಚಾರಣೆ ಮುಂದುವರಿದಿದೆ. ಈ ನಡುವೆ ಒಂದು ಬಣವು ಶನಿವಾರ ನಿಗದಿಗೊಳಿಸಿದ್ದ ಜಾರಂದಾಯ ದೈವದ ನೇಮವನ್ನು ನಡೆಯದಂತೆ ತಡೆಹಿಡಿದಿದೆ.

Advertisement

ಒಂದು ಊರು – ಒಂದು ಟ್ರಸ್ಟ್‌ – ಒಂದು ಮನೆ ನಡುವೆ ಈ ವ್ಯಾಜ್ಯ ಇದ್ದು, ನ್ಯಾಯಾಲಯದಲ್ಲಿದ್ದ ಮಧ್ಯಾವಧಿ ತಡೆಯಾಜ್ಞೆ ತೆರವಾದ ಕಾರಣ ಟ್ರಸ್ಟ್‌ನವರು ಹಾಗೂ ಊರಿನವರು ಒಳಪ್ರವೇಶಿಸದಂತೆ ಸಾನದ ಮನೆಯವರ ಪರ ಜಾರಂದಾಯ ಸೇವಾ ಸಮಿತಿಯು ದೈವಸ್ಥಾನದ ಬಾಗಿಲಿಗೆ ಜ. 6ರಂದು ರಾತ್ರಿ ಬೀಗ ಜಡಿದಿದೆ. ಪೊಲೀಸ್‌ ಕಾವಲನ್ನೂ ಹಾಕಲಾಗಿದೆ.

ಬೀಗ ತೆರೆಸುವುದು ನಮ್ಮ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ. ಕಾನೂನು ಸುವ್ಯವಸ್ಥೆಯಷ್ಟೇ ನಮ್ಮದು. ಶಾಂತಿ ಭಂಗವಾದಲ್ಲಿ ಎರಡೂ ಕಡೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ ತಿಳಿಸಿದ್ದಾರೆ.

ಸಾನದ ಮನೆಯಲ್ಲಿ ಪಡುಹಿತ್ಲು ಜಾರಂದಾಯ ಸೇವಾ ಟ್ರಸ್ಟ್‌ನ ನಿರ್ಮಾತೃ ದಿ| ಜಯ ಪೂಜಾರಿ ಅವರ ಉತ್ತರಕ್ರಿಯೆ ಶನಿವಾರ ನಡೆದಿದೆ. ಆದರೆ ಇತ್ತ ದೈವಕೋಲ ನಡೆಸಲಾಗದ್ದರಿಂದ 1,500 ಮಂದಿಗೆ ಸಿದ್ಧಪಡಿಸಿದ್ದ ಊಟವನ್ನು ಶಾಲಾ ಮಕ್ಕಳಿಗೆ ಹಂಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next