ಕಾಪು : ತೌಖ್ತೆ ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಾಡಿಪಟ್ಣ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯನ್ಸ್ ಟಗ್ಗನ್ನು ಮೇಲೇತ್ತಲು ಮಂಗಳೂರು ಬೇಂಗರೆಯ ಬದ್ರಿಯಾ ಹಾಗು ಮಂಗಳೂರಿನ ಯೋಜಕ ಕಂಪನಿ ಜಂಟಿಯಾಗಿ ಕಾರ್ಯಾನಿರ್ವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಈ ಕಾರ್ಯವನ್ನು ಆದಷ್ಟು ಬೇಗನೇ ನಿರ್ವಹಿಸಿ ಸ್ಥಳೀಯ ಜನತೆಗೆವಿರುವ ಸಾಂಕ್ರಾಮಿಕ ರೋಗದ ಭಯವನ್ನು ನನಿವಾರಿಸಬೇಕೆಂದು ಸೂಚನೆ ನೀಡಿದ್ದಾರೆ.
ಇಂದು ಪಡುಬಿದ್ರಿ ಕಾಡಿಪಟ್ಣದ ವಿಷ್ಣು ಭಜನಾ ಮಂಡಳಿಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನೆ,ಮಾಜಿ ಜಿ.ಪಂ ಶಶಿಕಾಂತ್ ಪಡುಬಿದ್ರಿ, ಎಂ ಆರ್ ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ, ಬದ್ರಿಯಾ ಹಾಗು ಯೋಜಕ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರಿದ್ದ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಟಗ್ಗನ್ನು ಆದಷ್ಟು ಶೀಘ್ರದಲ್ಲಿ ಇಲ್ಲಿಂದ ತೆರವುಗೊಳಿಸಬೇಕೆಂದಿದ್ದಾರೆ. ಎಂ ಆರ್ ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ಇದುವರೆಗಿನ ಕಾರ್ಯಾಚರಣೆ ವಿಫಲವಾಗಿ ವಾರಗಳ ಕಾಲ ತಗುಲಿರುವುದಕ್ಕೆ ಎಂ ಆರ್ ಪಿಎಲ್ ಸಂಪೂರ್ಣ ಹೊಣೆ.ಅದರೊಳಗಿನ ಸಿಬ್ಬಂದಿಗಳ ದೇಹಗಳನ್ನು ಹೊರತೆಗೆಯಲು ಹಾಗು ಟಗ್ಗನ್ನು ಪಡುಬಿದ್ರಿಯ ಈ ಪ್ರದೇಶದಿಂದ ಒಯ್ಯುವಂತಾಗಲು ತಾವು ಈ ಕುರಿತು ಹಾಗುವ ಕಚ್ಚಿಗಾಗಿ ಎಂ ಆರ್ ಪಿಎಲ್ ಯೋಚಿಸದು ಯೋಜಕ ಕಂಪನಿಯನ್ನು ಬದ್ರಯಾ ಕಂಪನಿಯೊಂದಿಗೆ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಕೋವಿಡ್ ಓಡಿಸಲು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು.!
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ,ಎರಡೂ ಕಂಪನಿಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಂದಾಣಿಕೆಯೊಂದಿಗೆ ಟಗ್ಗ್ ತೆರವು ಕಾರ್ಯಾಚರಣೆ ನಡೆಸಬೇಕೆಂದು ಸೂಚಿಸಿದ್ದಾರೆ. ಮಾಜಿ ಜಿ.ಪಂ ಶಶಿಕಾಂತ್ ಪಡುಬಿದ್ರಿ, ಸ್ಥಳೀಯರಿಗಿರುವ ಸಾಂಕ್ರಾಮಿಕ ರೋಗ ಭಯ ಮತ್ತು ಪರಿಸರ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅತೀ ಶೀಘ್ರ ಟಗ್ಗ್ ತೆರವು ಕಾರ್ಯಾಚರಣೆ ಆಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್ ಜಿ.ಜಿ.ಎಂ.ಯು. ವಿ ಐತಾಳ್, ಇ.ಡಿ.ಎಲ.ನ್ ಗೋವೆನ್, ನಿರ್ದೇಶಕ ಸಂಜಯ್ ವರ್ಮ, ಅಧಿಕಾರಿಗಳಾದ ಕಿರಣ್, ಮನೋಹರ್, ಮಂಗಳೂರು ಯೋಜಕ ಕಂಪನಿಯ ವಿನಯಕುಮಾರ್ ಹಾಗು ಚಂದ್ರಶೇಖರ, ಬದ್ರಿಯಾ ಕಂಪನಿಯ ಬಿಲಾಲ್ ಮೌದಿನ್, ತಾ.ಪಂ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೋಧ, ಸದಸ್ಯೆ ವಿಧ್ಯಾಶ್ರೀ, ಮಾಜಿ ಸದಸ್ಯ ಅಶೋಕ್ ಸಾಲ್ಯಾನ್, ಕಾಡಿಪಟ್ಣ ಮೊಗವೀರ ಮಹಾ ಸಭಾದ ಕಾರ್ಯದರ್ಶಿ ಸುಂದರ ಕರ್ಕೇರ, ಪಡುಬಿದ್ರಿ ಠಾಣಾ ಪ್ರಭಾರ ಪಿಎಸ್ಐ ಜಯ ಕೆ ಇದ್ದರು.