ಪಡುಬಿದ್ರಿ: ಸರಕಾರಿ ಮಾ. ಹಿ. ಪ್ರಾ. ಶಾಲೆ (ಕರ್ನಾಟಕ ಪಬ್ಲಿಕ್ ಸ್ಕೂಲ್) ಬಳಿಯಲ್ಲಿ ಸಾರ್ವಜನಿಕರಿಗೆ, ಹತ್ತಿರದ ಅಂಗಡಿ ಮಳಿಗೆಯ ಮಂದಿಗೆ ಅನುಕೂಲವಾಗಿದ್ದ ಪಡುಬಿದ್ರಿ ಪಂಚಾಯತ್ ಸುಪರ್ದಿಗೆ ಒಳಪಟ್ಟಿರುವ ಶುದ್ಧ ನೀರಿನ ಘಟಕದ ಕಾಯಿನ್ ಬೂತ್ ನೀರಿನ ಸೇವೆ ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಸ್ಥಗಿತಗೊಂಡಿದೆ.
ಸುಮಾರು ಮೂರು ವರ್ಷಗಳ ಹಿಂದೆ ಜಿ. ಪಂ., ತಾ. ಪಂ. ಮತ್ತು ಪಡಬಿದ್ರಿ ಗ್ರಾ. ಪಂ.ಗಳ ಪ್ರಯತ್ನಗಳಿಂದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಶಾಸಕತ್ವದ ಅವಧಿಯಲ್ಲಿ ಈ ಶುದ್ಧ ನೀರಿನ ಘಟಕವು ಉದ್ಘಾಟನೆಗೊಂಡಿತ್ತು. ಕೆಆರ್‌ಐಡಿಎಲ್ ಮೂಲಕ ಸುಮಾರು 9.85 ಲಕ್ಷ ರೂ.ವೆಚ್ಚದಲ್ಲಿ ಅನುಷ್ಠಾನಿಸಲಾಗಿದ್ದ ಈ ಘಟಕವು ಸುತ್ತಮುತ್ತಲಿನ ನಾಗರಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿತ್ತು. ಒಂದು ರೂ. ನಾಣ್ಯವನ್ನು ಹಾಕಿದ್ದಲ್ಲಿ 10ಲೀಟರ್ ನೀರು ಬರುತ್ತಿತ್ತು.
ಆದರೆ ಈ ಬಾರಿ ಸಿಡಿಲ ಹೊಡೆತ ವೊಂದರಿಂದ ತಿಂಗಳ ಹಿಂದೆ ಕೆಟ್ಟು ಹೋಗಿರು ವುದಾಗಿಯೂ, ಅದರ ಮೇಲು ಸ್ತುವಾರಿ ಮತ್ತು ರಿಪೇರಿ ಕಾರ್ಯ ಗಳನ್ನು ಗುತ್ತಿಗೆ ಪಡೆದಿರುವ ಹುಬ್ಬಳ್ಳಿಯ ತಂಡವು ಸದ್ಯ ಕಾರವಾರದಲ್ಲಿದ್ದು ಸೋಮವಾರದ ಬಳಿಕ ಪಡುಬಿದ್ರಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದಾಗಿ ಪಂಚಾಯತ್ ಪಂಪು ಚಾಲಕ ವೃತ್ತಿಯ ಮೋಹನ್‌ತಿಳಿಸಿದ್ದಾರೆ.
ಈ ಕುರಿತಾಗಿ ತಮ್ಮ ಗಮನಕ್ಕೆ ಇದುವರೆಗೂ ಬಂದಿರಲಿಲ್ಲ. ಈ ಕೂಡಲೇ ಅದರ ಮೇಲುಸ್ತುವಾರಿ ತಂಡವನ್ನು ಸಂಪರ್ಕಿಸಿ ಅದನ್ನು ಸರಿಪಡಿಸುವತ್ತ ಆದ್ಯತೆಯ ಗಮನವನ್ನು ನೀಡಲಾಗುವುದು. ಈ ಶುದ್ಧ ನೀರಿನ ಘಟಕವು ಇದೇ ರೀತಿಯಲ್ಲಿ ಹಿಂದೊಮ್ಮೆ ಹಾಳಾಗಿತ್ತು. ಆದರೆ ಅದನ್ನು ಆ ಕೂಡಲೇ ಸರಿಪಡಿಸಲಾಗಿತ್ತು ಎಂದು ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ಹೇಳಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪಿಡಿಒ ಪ್ರತಿಕ್ರಿಯೆಗೆ ಲಭ್ಯರಿರಲಿಲ್ಲ. ತಮಗೆ ಶುದ್ಧ ನೀರು ಈ ಘಟಕದಿಂದ ಕೈಗೆಟಕುವ ದೂರದಲ್ಲಿದ್ದುದರಿಂದ ಸುಲಭವಾಗಿ ಸಿಗುತ್ತಿತ್ತು. ಸದ್ಯ ಅಧಿಕ ಬೆಲೆ ತೆತ್ತು ಪಡೆದುಕೊಳ್ಳಬೇಕಿದೆ. ಕೆಲವರು ಮನೆ ಯಿಂದ ಬರುತ್ತಲೇ ಕುಡಿಯುವ ನೀರಿನ ಸಮೇತ ಬರುತ್ತಾರೆ ಎಂಬುದಾಗಿ ಹತ್ತಿರದ ವ್ಯಾಪಾರಿ ಮಳಿಗೆಯ ಮಂದಿ ದೂರು ತ್ತಿದ್ದಾರೆ. ಹಾಗಾಗಿ ಪಡುಬಿದ್ರಿ ಗ್ರಾ. ಪಂ. ಈ ಬಗ್ಗೆ ಗಮನ ಹರಿಸಿ ಇದನ್ನು ಸರಿಪಡಿ ಸುವತ್ತ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ವಾದವಾಗಿದೆ.