Advertisement

ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ: 132ನೇ ವಾರ್ಷಿಕ ಮಹಾಸಭೆ

06:15 PM Feb 15, 2020 | Suhan S |

ಮುಂಬಯಿ, ಫೆ. 14: ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 132ನೇ ವಾರ್ಷಿಕ ಮಹಾಸಭೆ ಮತ್ತು ವಿಹಾರಕೂಟವು ಫೆ. 9 ರಂದು ಪೂರ್ವಾಹ್ನ 9.30 ರಿಂದ ಮಡ್‌ ಐಲ್ಯಾಂಡ್‌ನ‌ ರಾವತ್‌ಪಿಕ್‌ನಿಕ್‌ ಕಾಟೇಜ್‌ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ಮುಂಬಯಿ ಸಭಾದ ಅಧ್ಯಕ್ಷ ಮಾಧವ ಟಿ. ಪುತ್ರನ್‌ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಸದಾ ನಂದ ಮೆಂಡನ್‌, ನ್ಯಾಯವಾದಿ ಕೃಷ್ಣರಾಜ್‌ ಕೋಟ್ಯಾನ್ಕರ್‌, ಲಲಿತಾ ಮೆಂಡನ್‌, ಮಾ| ಕ್ಷಿತಿಜ್‌ ಪುತ್ರನ್‌ ಅವರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕೆ. ಎನ್‌. ಚಂದ್ರಶೇಖರ್‌ ವಿರಾರ್‌ ಅವರು ಪ್ರಾರ್ಥನೆಗೈದರು. ಗತ ಸಾಲಿನಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹಿರಿಯ ಸದಸ್ಯರನ್ನು, ಸೇವಾ ನಿವೃತ್ತರಾದವರನ್ನು ಗೌರವಿಸಲಾಯಿತು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ನಾಗೇಶ್‌ ಪುತ್ರನ್‌, ಆಯವ್ಯಯ ಪಟ್ಟಿಯನ್ನು ಜತೆ ಕಾರ್ಯದರ್ಶಿ ದೇವಪ್ಪ ಸಾಲ್ಯಾನ್‌ ಮಂಡಿಸಿ, ಸರ್ವಾನುಮತದಿಂದ ಮಂಜೂರು ಮಾಡಿಕೊಂಡರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಶೈಕ್ಷಣಿಕ ಸಾಧಕ ಮಕ್ಕಳನ್ನು ಹಾಗೂ ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಮಹಾಜನ ಸಂಘ ಮತ್ತು ಕಾಡಿಪಟ್ಣ, ನಡಿಪಟ್ಣ ವಿದ್ಯಾಪ್ರಚಾರಕ ಸಂಘ ಮುಂಬಯಿ ಸಮಿತಿಯನ್ನು ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ರಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಗತ ಸಾಲಿನಲ್ಲಿ ಉತ್ತಮ ಸೇವೆಗೈದ ಉತ್ತಮ ಸೇವಕ ಶೇಖರ್‌ ಕೋಟ್ಯಾನ್‌ ಆಯ್ಕೆಯಾಗಿ ದಿ| ಕುಶಲ್‌ದಾಸ್‌ ಕೋಟ್ಯಾನ್ಕರ್‌ ಪ್ರಶಸ್ತಿಯನ್ನು ನೀಡಲಾಯಿತು.

ಹಿರಿಯ ಮತ್ತು ಕಿರಿಯ ಸದಸ್ಯರು ಸಭೆಯ ಬೆಳವಣಿಗೆಯ, ಊರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತಿಯ ಬಗ್ಗೆ, ಶ್ರೀ ವಿಷ್ಣು ಮಂದಿರದ ಬೆಳವಣಿಗೆಯ ಬಗ್ಗೆ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಮುಂಬಯಿ ಶಾಖೆಯ ಹಿರಿಯ ಸದಸ್ಯರಾದ ಕೆ. ಎನ್‌. ಚಂದ್ರ ಶೇಖರ್‌ ವಿರಾರ್‌ ಉಪಸ್ಥಿತರಿದ್ದು ಊರಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್‌ ಕೆ. ಪುತ್ರನ್‌ ವಂದಿಸಿದರು.

Advertisement

ವಿವಿಧ ಸ್ಪರ್ಧೆಗಳಲ್ಲಿ ಚೆಂಡೆಸೆತ ಸ್ಪರ್ಧೆಯಲ್ಲಿ ಕ್ಷಿತಿಜ್‌ ಪುತ್ರನ್‌ ಪ್ರಥಮ, ಆರವ್‌ ಶ್ರೀಯಾನ್‌ ದ್ವಿತೀಯ, ರನ್ನಿಂಗ್‌ ರೇಸ್‌ನಲ್ಲಿ ವಿಜಯಲಕ್ಷ್ಮೀ ಸಾಲ್ಯಾನ್‌ ಪ್ರಥಮ, ಹೀರಾ ಶ್ರೀಯಾನ್‌ ದ್ವಿತೀಯ, ಕಾಲಿಗೆ ಹಗ್ಗಕಟ್ಟಿ ಓಡುವ ಸ್ಪರ್ಧೆಯಲ್ಲಿ ಪುನೀತ್‌ ಶ್ರೀಯಾನ್‌ ಪ್ರಥಮ, ಶ್ರೇಯಾ ಕುಂದರ್‌ ದ್ವಿತೀಯ, ಪಾಸಿಂಗ್‌ ಪಾರ್ಸೆಲ್‌ ಸ್ಪರ್ಧೆಯಲ್ಲಿ ಅಮಿತ್‌ ಸುವರ್ಣ ಪ್ರಥಮ, ಶಾಂಭವಿ ಪುತ್ರನ್‌ ದ್ವಿತೀಯ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಅರ್ಶಿತ್‌ ಕುಂದರ್‌ ಪ್ರಥಮ, ಗುಲಾಬಿ ಜಿ. ಕುಂದರ್‌ ದ್ವಿತೀಯ

ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಭರತ್‌ ಮೆಂಡನ್‌ ಪ್ರಥಮ, ಅನೀಶ್‌ ಪುತ್ರನ್‌ ಅವರು ದ್ವಿತೀಯ ಬಹುಮಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next