Advertisement

ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾಯಾಗ

11:56 PM Feb 22, 2020 | Sriram |

ಉಡುಪಿ: ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನವೀಕರಣ ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾ ಯಾಗ, ಶೈವೋ ತ್ಸವ, ರಂಗಪೂಜೆ ಮಹೋತ್ಸವವು ಫೆ. 24ರಿಂದ 29ರ ವರೆಗೆ ಜರಗಲಿದೆ.

Advertisement

ಫೆ. 24ರಂದು ಗಣಪತಿ ಹವನ, ವೇದವ್ಯಾಸ ಪೂಜೆ, ಮೃತ್ಯುಂಜಯ ಹೋಮ, ಪೂರ್ಣ ನವಗ್ರಹ ಹೋಮ,ಉಗ್ರಾಣ ಮುಹೂರ್ತ, 3.30ಕ್ಕೆ ಜೋಡುರಸ್ತೆ ಬ್ರಹ್ಮಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ, ಫೆ. 25ರಂದು ಸಪ್ತದಶ ದ್ರವ್ಯಮಿಳಿತ ಸೇಕ ಕಲಶಸ್ನಪನ, ಶಾಂತಿ ಪ್ರಾಯಶ್ಚಿತ್ತ ಹೋಮ, ಶ್ರೀಸೂಕ್ತಪುರುಷ ಸೂಕ್ತ ಹೋಮ, ಐಕಮತ್ಯ ಮಂತ್ರ ಹೋಮ, ಸಂಜೆ ಶಕ್ತಿದಂಡಕ ಮಂಡಲ ಪೂಜೆ, ಮಹಾ ಸುದರ್ಶನ ಹೋಮ ನಡೆಯಲಿದೆ.

ಫೆ. 26ರಂದು ನರಸಿಂಹ ಮಂತ್ರ
ಹೋಮ, ಮನ್ಯುಸೂಕ್ತ ಮಂತ್ರ ಹೋಮ,ನಾಗದೇವರಿಗೆ ಪವಮಾನ, ಆಶ್ಲೇಷಾಬಲಿ, ಭೂತದ ಪಾಡಿ ಬ್ರಹ್ಮಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ, ಸರ್ಪತ್ರಯ ಮಂತ್ರ ಹೋಮಗಳು, ಸಂಜೆ 4.30ರಿಂದ ತರಕಾರಿ ಮುಹೂರ್ತ, ಭಜನೆ, ಪಂಚವಿಂಶತಿ ದ್ರವ್ಯಮಿಳಿತ 501 ಕಲಶಾಧಿವಾಸ, ಫೆ. 27ರಂದು ಪಂಚಾಮೃತಾಭಿಷೇಕ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬೆಳಗ್ಗೆ 8.12ಕ್ಕೆ ಬ್ರಹ್ಮಕಲಶಾಭಿಷೇಕ, ಲಕ್ಷ್ಮೀನಾರಾಯಣ ಹೃದಯಹೋಮ, 1008 ಲಕ್ಷ್ಮೀಶೋಭಾನೆ ಪಾರಾಯಣ ಸಮರ್ಪಣೆ, 11ಕ್ಕೆ ಅಲೆವೂರು ಸುಂದರ ಶೇರಿಗಾರ್‌ ಬಳಗದವರಿಂದ ಸ್ಯಾಕೊÕàಫೋನ್‌ ವಾದನ, ಮಧ್ಯಾಹ್ನ ಮಹಾ ಅನ್ನಸಂತ ರ್ಪಣೆ, ಸಂಜೆ ಅಗ್ನಿ ಜನನ, ನವಾಕ್ಷರೀ ಮಂತ್ರ ಹೋಮ ಜರಗಲಿದೆ.

ಫೆ. 28ರಂದು ಶತಚಂಡಿಕಾಯಾಗ, ಅಲೆವೂರು ಸುಂದರ ಶೇರಿಗಾರ್‌ರಿಂದ ನಾಗಸ್ವರ ವಾದನ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ಶೈವೋತ್ಸವ, ಅಷ್ಟಾವಧಾನ ಸೇವೆ, ರಂಗಪೂಜೆ, ಫೆ. 29ರಂದು ಲಲಿತಾ ಸಹಸ್ರ ಕದಳೀಯಾಗ, ಮಹಾಮಂತ್ರಾಕ್ಷತೆ ನಡೆಯಲಿದೆ.

ಫೆ. 24ರಿಂದ 27ರ ತನಕ ಪ್ರತಿದಿನ ಸಂಜೆ 5.30ರಿಂದ ಧಾರ್ಮಿಕ ಸಭೆ ಮತ್ತು ರಾತ್ರಿ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ಗಾನ, ನಾಟಕ, ತಾಳವಾದ್ಯ ಸಂಗೀತ ಇತ್ಯಾದಿ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಡಾ| ಕೆ. ಕೃಷ್ಣರಾಜ ಭಟ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next