Advertisement

ಇಂಗ್ಲೆಂಡ್‌ನಲ್ಲಿ ನಿಗದಿಯಂತೆ ಡಿ.1ಕ್ಕೆ ಪದ್ಮಾವತಿ ರಿಲೀಸ್‌ 

10:56 AM Nov 23, 2017 | |

ಮುಂಬಯಿ: ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಪದ್ಮಾವತಿ ಚಿತ್ರ ನಿಗದಿಯಂತೆ ಡಿಸೆಂಬರ್‌ 1 ರಂದು  ಇಂಗ್ಲೆಂಡ್‌ ನಲ್ಲಿ ಬಿಡುಗಡೆಯಾಗಲಿದೆ. 

Advertisement

ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಮತ್ತು ಚಿತ್ರತಂಡಕೆ ರಿಲೀಫ್ ಎಂಬಂತೆ ಚಿತ್ರವನ್ನು ಇಂಗ್ಲೆಂಡ್‌ನ‌ಲ್ಲಿ ಬಿಡುಗಡೆಗೊಳಿಸಲು ಬ್ರಿಟಿಷ್‌ ಬೋರ್ಡ್‌ ಆಫ್ ಫಿಲ್ಮ್ ಕ್ಲಾಸಿಫಿಕೇಷನ್‌ ಅನುಮತಿ ನೀಡಿದೆ.

ಡಿ.1ರಂದು ಬಿಡುಗಡೆಯಾಗಬೇಕಿ ದ್ದ ಪದ್ಮಾವತಿ ಚಿತ್ರಕ್ಕೆ ಸಿಬಿಎಫ್ಸಿ ಇದುವರೆಗೆ  ಸೆನ್ಸಾರ್‌ ಸರ್ಟಿಫಿಕೇಟ್‌ ನೀಡಿಲ್ಲ. ಸೆನ್ಸಾರ್‌ ಮಂಡಳಿ ಸದಸ್ಯರು ಈ ಚಿತ್ರವನ್ನು ವೀಕ್ಷಿಸಿಲ್ಲ. ಸರ್ಟಿಫಿಕೇಟ್‌ ದೊರತರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ರಜಪೂತ್‌ ಕರ್ಣಿ ಸೇನೆ ಘೋಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next