Advertisement
ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಉದ್ದೇಶ ಪದ್ಮರಾಜ್ ಅವರನ್ನು ಗೆಲ್ಲಿಸುವುದಲ್ಲ, ಬದಲಿಗೆ ಹಿಂದೂ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುವುದೇ ಆಗಿದೆ ಎಂದರು.
ಈಗ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರು ಒಂದು ಪಕ್ಷದ ಪರವಾಗಿ ಮತ ಯಾಚನೆ ಮಾಡುವುದು ಬಿಲ್ಲವ ಸಮುದಾಯಕ್ಕೆ ಮಾಡಿರುವ ಅವಮಾನ, ಹಾಗಾಗಿ ಅವರು ಮಂಡಲದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಲಿ ಎಂದರು. ಬಿಲ್ಲವರು ಸದಾ ರಾಷ್ಟ್ರವಾದಿಗಳು. ಆದರೆ ಸಮುದಾಯದ ಸಂಘಟನೆ ಹೆಸರಿನಲ್ಲಿ ಕೆಲವರು ಹಾದಿತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ ಎಂದರು.
Related Articles
ಲೇಡಿಹಿಲ್‌ನಲ್ಲಿ ನಾರಾಯಣ ಗುರು ವೃತ್ತ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆಯನ್ನು ಕಾಂಗ್ರೆಸ್ ಹಾಗೂ ಸ್ವತಃ ಪದ್ಮರಾಜ್ ಅವರೇ ವಿರೋಧಿಸಿದ್ದರು. ಬಿರುವೆರ್ ಕುಡ್ಲದ ಸ್ಥಾಪಕ ಉದಯ ಪೂಜಾರಿ, ಸಂಸದ ನಳಿನ್, ಶಾಸಕ ವೇದವ್ಯಾಸ ಕಾಮತ್ ಮತ್ತಿತರ ಶ್ರಮದಿಂದ ಹೆಸರು ಬದಲಾವಣೆಯಾಗಿದೆ. ಈಗ ಬಿಲ್ಲವರಿಗೆ ಓಟು ಕೊಡಿ ಎಂದು ಕೇಳುವ ಕಾಂಗ್ರೆಸಿಗರು ಜನಾ ರ್ದನ ಪೂಜಾರಿ ಅವರನ್ನು ಕೆಲವು ಕಾಂಗ್ರೆಸಿಗರು ನಿಂದಿಸಿದಾಗ ಸುಮ್ಮನಿ ದ್ದರು ಎಂದರು. ನಿತಿನ್ ಕುಮಾರ್, ರಾಜಗೋಪಾಲ ರೈ ಇದ್ದರು.
Advertisement
ಬಿಲ್ಲವ ನಿಗಮಕ್ಕೆ ಚಿಕ್ಕಾಸು ಕೊಡದ ಸರಕಾರಬಿಜೆಪಿ ಸರಕಾರ ಹಿಂದೆ ಶ್ರೀ ನಾರಾಯಣಗುರು ಅಭಿ ವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಿದೆ, ಆದರೆ ಈ ಬಾರಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಸರಕಾರ ಒಂದು ರೂ. ಅನು ದಾನವನ್ನೂ ಅದಕ್ಕೆ ಇರಿಸಿಲ್ಲ, ಈ ಹಿಂದೆ ಬಿಲ್ಲವ ನಿಗಮ ಸ್ಥಾಪನೆಯಾಗಬೇಕು ಎಂದು ಹೋರಾಡಿದ ಕಾಂಗ್ರೆಸಿಗರು ಈಗ ಎಲ್ಲಿದ್ದಾರೆ ಎಂದು ಬಂಟ್ವಾಳ್ ಪ್ರಶ್ನಿಸಿದರು.