ಕಾಸರಗೋಡು: ಪದ್ಮಪ್ರಿಯಾ ಮಹಿಳಾ ಭಜನಾ ಮಂಡಳಿಯ 6ನೇ ವಾರ್ಷಿಕೋತ್ಸವವನ್ನು ತಂಡದ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಏಳು ಮನೆಗಳಿಗೆ ತೆರಳಿ ಭಜನಾ ಸಂಕೀರ್ತನಾ ಯಾತ್ರೆ ನಡೆಸುವ ಮೂಲಕ ಆಚರಿಸಲಾಯಿತು.
ಶಿವಳ್ಳಿ ಬ್ರಾಹ್ಮಣ ಸಂಘ ವಲಯಾಧ್ಯಕ್ಷ ವೇಣುಗೋಪಾಲ ಕಲ್ಲೂರಾಯ ಸಹಕಾರ ದೊಂದಿಗೆ ಚಕ್ರಪಾಣಿ ದೇವಪೂಜಿತ್ತಾಯ ಅವರ ಮನೆಯಲ್ಲಿ ಭಜನಾ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಲಾಯಿತು.
ಅನಂತರ ಉಳಾಲ್‌ಬೂಡು ಪ್ರಕಾಶ ಕಡಮಣ್ಣಾಯ, ಕೂಡ್ಲು ಬಾಲಕೃಷ್ಣ ಅರಳಿತ್ತಾಯ, ಸತ್ಯನಾರಾಯಣ ನೆಲ್ಲಿಕುಂಜೆ, ಸದಾಶಿವ ಉಡುಪ ವಿದ್ಯಾನಗರ, ಮಧೂರು ಕಕ್ಕೆಪ್ಪಾಡಿ ವಿಷ್ಣು ಭಟ್ ಮನೆಯಲ್ಲಿ ಭಜನಾ ಸಂಕೀರ್ತನಾ ಮುಂದುವರಿದು ಉಳಿಯ ವಿಷ್ಣು ಆಸ್ರ ಅವರ ಮನೆಯಲ್ಲಿ ಭಜನಾ ಸಂಕೀರ್ತನೆ ಹಾಗೂ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗುರುವಂದನೆ ಮಾಡುವ ಮೂಲಕ ಯಾತ್ರೆ ಸಮಾಪನಗೊಂಡಿತು.
ನಟರಾಜ ಕಲ್ಲೂರಾಯ, ವೇಣುಗೋಪಾಲ ಕಲ್ಲೂರಾಯ ಪಕ್ಕವಾದ್ಯದಲ್ಲಿ ಸಹಕರಿಸಿದರು.
ವೆಂಕಟೇಶ್ ಎ.ಪಿ., ಸಂತೋಷ್‌ಕೃಷ್ಣ ಕಡಮಣ್ಣಾಯ ಯಾತ್ರೆಯಲ್ಲಿ ಪಾಲ್ಗೊಂಡರು. ಮಧುರಾ ಅಗ್ಗಿತ್ತಾಯ ಕಾರ್ಯಕ್ರಮ ನಿರೂಪಿಸಿದರು.