ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯಡಿ ರಾಜ್ಯಸರ್ಕಾರ ಅಕ್ಕಿಯನ್ನು ದಿನೇ ದಿನೆ ಕಡಿತ ಮಾಡುತ್ತಿದೆಯೆಂಬ ಗ್ರಾಹಕರ ಅಸಮಾಧಾನದ ನಡುವೆಯೇ ,ಏಪ್ರಿಲ್‌ನಲ್ಲಿ ಮತ್ತೂಮ್ಮೆ 3 ಕೆ.ಜಿ.ಅಕ್ಕಿ ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಅದರ ಬದಲಿಗೆ ರಾಗಿ ನೀಡುವಯೋಜನೆ ಜಾರಿಗೊಳಿಸಲು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಾಗಿದ್ದು ಅದನ್ನುಏಪ್ರಿಲ್‌ನಲ್ಲಿ ಪಡಿತರ ಕಾರ್ಡುದಾರರಿಗೆ ನೀಡಲುಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಬಿಪಿಎಲ್‌ಪಡಿತರ ಚೀಟಿ ಹೊಂದಿರುವ ಗ್ರಾಹಕರು ಪ್ರತಿ ಯುನಿಟ್‌ಗೆ 5 ಕೆ.ಜಿ.ಅಕ್ಕಿ ಪಡೆದುಕೊಳ್ಳುತ್ತಿದ್ದರು. ಆದರೆ ಏಪ್ರಿಲ್‌ನಲ್ಲಿಅನ್ನಭಾಗ್ಯ ಯೋಜನೆಯಡಿ ಅಕ್ಕಿಗೆ ಕತ್ತರಿ ಬೀಳಲಿದ್ದು ಪ್ರತಿಸದಸ್ಯರಿಗೆ 2 ಕೆ.ಜಿ.ಅಕ್ಕಿ ಲಭಿಸಲಿದೆ.
ಕಡಿತಗೊಂಡಿರುವಅಕ್ಕಿ ಬದಲಾಗಿ 3 ಕೆ.ಜಿ.ರಾಗಿ ಭಾಗ್ಯ ಒದಗಿ ಬರಲಿದೆ.ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವಕುಟುಂಬ ಸದಸ್ಯರಿಗೆ ತಲಾ 2 ಕೆ.ಜಿ.ಅಕ್ಕಿ 3 ಕೆ.ಜಿ.ರಾಗಿಹಾಗೂ 1 ಪಡಿತರ ಚೀಟಿಗೆ 2 ಕೆ.ಜಿ.ಗೋಧಿ ವಿತರಿಸಲುಯೋಜನೆ ರೂಪಿಸಲಾಗಿದೆ. ಅಂತ್ಯೋದಯ ಪಡಿತರಚೀಟಿಗೆ 15 ಕೆ.ಜಿ. ಅಕ್ಕಿ ಹಾಗೂ 20 ಕೆ.ಜಿ. ರಾಗಿ ದೊರೆಯಲಿದೆ. ಎಪಿಎಲ್ ಕಾರ್ಡ್ ಗ್ರಾಹಕರಿಗೆ 5 ಕೆ.ಜಿ.ಅಕ್ಕಿ (ಕೆಜಿತಲಾ 15 ರೂ.ಗಳಂತೆ ವಿತರಿಸಲಾಗುತ್ತದೆ). ಒಂದಕ್ಕಿಂತಹೆಚ್ಚು ಸದಸ್ಯರು ಹೊಂದಿದ್ದಲ್ಲಿ ಕೇವಲ 10 ಕೆ.ಜಿ. ಮಾತ್ರನೀಡಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದಿಂದ ಆದೇಶ ಬಂದಿದೆಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3 ಪಟ್ಟು ಹೆಚ್ಚಾಗಿ ರಾಗಿ ಖರೀದಿಸಲಾಗಿದೆ. ಅದನ್ನು ಪಡಿತರ ಚೀಟಿ ಹೊಂದಿರುವಗ್ರಾಹಕರಿಗೆ ನೀಡಲು ಸರ್ಕಾರ ನಿರ್ಧರಿಸಿದೆ.
ಏಪ್ರಿಲ್‌ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ2 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 3 ತಿಂಗಳು ಅಕ್ಕಿ ಬದಲಿಗೆ ರಾಗಿನೀಡಲಾಗುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಪಿ.ಸವಿತಾ ತಿಳಿಸಿದ್ದಾರೆ.
ಎಂ.ಎ.ತಮೀಮ್ ಪಾಷಾ