Advertisement

ಭತ್ತ ಖರೀದಿ ಕೇಂದ್ರ ವಿಳಂಬ: ರೈತರ ಪರದಾಟ

01:25 PM Jan 24, 2020 | Suhan S |

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರದ ವಿಳಂಬ ಧೋರಣೆಯಿಂದ ಭತ್ತ ಮನೆ ಮತ್ತು ಕಣದಲ್ಲಿಯೇ ಇಟ್ಟಿರುವ ರೈತರು ಪರದಾಡುವಂತಾಗಿದೆ ಎಂದು ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೃಷಿ ಇಲಾಖೆ ಆಯಾ ಹೋಬಳಿ ಕೇಂದ್ರದಲ್ಲಿ ಕಚೇರಿ ತೆರೆದು ಭತ್ತ ನೋಂದಣಿ ಮಾಡಿಕೊಂಡಿದೆ. ಆದರೆ ಭತ್ತ ಖರೀದಿಸುವಲ್ಲಿ ವಿಳಂಬವಾಗಿದೆ. ಇದರಿಂದ ಮನೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಿಕೆಗಾಗಿ ಕಾಯುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ನಡೆಯಿತು. ಇನ್ನೇನು ಇಂದೋ ನಾಳೆಯೋ ಖರೀದಿ ಕೇಂದ್ರ ಆರಂಭಿಸಬಹುದೆಂಬ ಆಸೆ ಇತ್ತು. ಆದರೆ, ಸರ್ಕಾರದ ಬೇಜವಾಬ್ದಾರಿ ಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ತೆರೆದರೂ ಎಕರೆಗೆ ಕೇವಲ 16 ಕ್ವಿಂಟಲ್‌ ಭತ್ತ ಖರೀದಿಸುವುದು. ಹಾಗಿದ್ದರೆ ಬೆಳೆದಿರುವ ಭತ್ತವೆಲ್ಲ ಏನು ಮಾಡಬೇಕೆಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.

ಈಗಾಗಲೇ ತಾಲೂಕಾದ್ಯಂತ 1500 ಮಂದಿ ರೈತರು ನೋಂದಣಿ ಮಾಡಿಕೊಂಡು ಎಲ್ಲಿಗೆ ಭತ್ತ ಸಾಗಿಸಲು ಕಾಯುತ್ತಿದ್ದಾರೆ. ರೈತರ ಮೊಬೈಲ್‌ ನಂ. ಪಡೆದ ನೋಂದಣಾಧಿಕಾರಿಗಳು ಭತ್ತವನ್ನು ಯಾವ ಅಕ್ಕಿ ಗಿರಣಿಗೆ ಸಾಗಿಸಬೇಕು ಎಂದು ರೈತರಿಗೆ ಮೆಸೇಜ್‌ ಬರುತ್ತದೆ. ಅಲ್ಲಿವರೆಗೆ ಕಾಯಬೇಕು ಎಂದು ರೈತರುಬಳಿಗೆ ಬಂದವರಿಗೆ ಕೂಡಲೆ ನೋಂದಣಿಯಾದ ರೈತರಿಂದ ತ್ವರಿತ ಭತ್ತ ಖರೀದಿ ಮಾಡಿಕೊಳ್ಳುವುದು ಸೂಕ್ತ ಎಂದು ರೈತ ಬೈರಪ್ಪ ಒತ್ತಾಯಿಸಿದ್ದಾರೆ.

ಫೆ.29 ಕೊನೆ ದಿನಾಂಕ: ಎಕರೆಗೆ 16 ಕ್ವಿಂಟಲ್‌ ಭತ್ತ ಹಾಗೂ 15 ಕ್ವಿಂಟಲ್‌ ರಾಗಿ ಕೊಂಡುಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ರೈತರ ಹೆಸರಿನಲ್ಲಿರುವ ಪಹಣಿಗಳ ಆಧಾರದಲ್ಲಿ ಆ ರೈತರಿಂದ ಭತ್ತ ರಾಗಿ ಖರೀದಿ ಮಾಡಲಾಗುತ್ತದೆ. ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಫೆ.29 ಕೊನೆ ದಿನಾಂಕವಾಗಿರುತ್ತದೆ. ಬಳಿಕ ನೋಂದಣಿಯಾದ ರೈತರಿಂದ ಭತ್ತ ಖರೀದಿ ಮಾಡಿಕೊಳ್ಳಲಾಗುತ್ತದೆ. ಇದುವರೆಗೆ ಯಾವ ಕೇಂದ್ರದಲ್ಲೂ ಭತ್ತ ಖರೀದಿಯಾಗಿಲ್ಲ. ನೋಂದಣಿ ಮಾತ್ರ ಚಾಲ್ತಿಯಲ್ಲಿದೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಗಳಿಂದ ರೈತರಿಗೆ ಮೆಸೇಜ್‌ಕಳುಹಿಸಲಾಗುತ್ತದೆ. ಆಗ ಭತ್ತ ಆಯಾ ಅಕ್ಕಿಗಿರಣಿಗೆ ಸಾಗಿಸಬೇಕಿದೆ ಎಂದು ಆಹಾರ ಸಹಾಯಕ ನಿರೀಕ್ಷಕಿ ಪೂರ್ಣಿಮಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next