Advertisement
ಸಂಕಲಕರಿಯದ ಯುವ ಸಾಧಕ ಕೃಷಿಕ ತನ್ನ ಹಿರಿಯರ ಜಮೀನಿನ ಜತೆ ಸುಮಾರು 20 ಎಕರೆ ಕೃಷಿ ಭೂಮಿಗಳಲ್ಲಿ ಭತ್ತದ ಬೆಳೆ ಬೆಳೆದಿದ್ದರು. ಇದೀಗ ಅವೆಲ್ಲವೂ ಕಟಾವಿಗೆ ಬಂದಿದ್ದು ಪ್ರತೀ ದಿನ ಮಧ್ಯಾಹ್ನ ಆರಂಭವಾಗುತ್ತಿರುವ ಮಳೆ ಇವರ ಕೃಷಿ ಕಾಯಕಕ್ಕೆ ಅಡ್ಡಿಯಾಗಿದೆ. ಪ್ರತಿ ದಿನ ಮಧ್ಯಾಹ್ನ ಮಳೆ ಆರಂಭವಾಗುತ್ತಿದ್ದು ಬೆಳೆದು ನಿಂತ ಪೈರುಗಳನ್ನು ಯಂತ್ರದ ಮೂಲಕ ಕಟಾವು ಮಾಡಿ ತರಾತುರಿಯಲ್ಲಿ ಗೋಣಿಚೀಲಗಳಿಗೆ ತುಂಬಿಸಲಾಗುತ್ತಿದೆ.
ಯಂತ್ರಗಳ ಮೂಲಕ ಕಟಾವು ಮಾಡಿ ಭತ್ತವನ್ನು ಕೂಡಲೇ ಗೋಣಿಚೀಲಗಳ ಮೂಲಕ ತುಂಬಿ ಸಾಗಿಸಲಾಗುತ್ತಿದ್ದರೂ ಬೆಲೆ ಬಾಳುವ ಬೈಹುಲ್ಲುಗಳು ಗದ್ದೆಯಲ್ಲೇ ಇದ್ದು ಮಳೆ ನೀರಿಗೆ ಕೊಳೆಯುತ್ತಿವೆ. ಈ ಕಾರಣಕ್ಕಾಗಿ ಅತಿಯಾಗಿ ಬರುತ್ತಿರುವ ಮಳೆ ಕರಾವಳಿಯ ಕೃಷಿಕರಿಗೆ ಇದೀಗ ಶಾಪವಾಗತೊಡಗಿದೆ. ಮುಂಡ್ಕೂರು, ಬೆಳ್ಮಣ್‌ಗಳಲ್ಲಿ ಕಟಾವು ಯಂತ್ರಗಳು ರೆಡಿ
ಮುಂಡ್ಕೂರು ಹಾಗೂ ಬೆಳ್ಮಣ್ ಬಾಗದಲ್ಲಿ ಭತ್ತ ಕಟಾವು ಯಂತ್ರಗಳು ಸಿದ್ಧವಾಗಿದ್ದು ಗಂಟೆಗೆ 2,200 ರೂ. ದರದಲ್ಲಿ ಶಿವಮೊಗ್ಗದ ಮಾಲತೇಶ ಎಂಬವರು ಈ ಯಂತ್ರಗಳನ್ನು ಒದಗಿಸುತ್ತಿದ್ದಾರೆ. ಈಗಾಗಲೇ 4 ಕಟಾವು ಯಂತ್ರಗಳು ಮುಂಡ್ಕೂರು ಪರಿಸರದಲ್ಲಿ ಓಡಾಡುತ್ತಿವೆ. ಬೈಹು ಲ್ಲು ಕಟ್ಟುವ ಯಂತ್ರಗಳೂ ಸಜ್ಜಾಗಿದ್ದು ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಸಹಕಾರಿಯಾಗಿವೆ.
Related Articles
Advertisement