Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ

03:39 PM Feb 23, 2021 | Team Udayavani |

ಶ್ರೀನಿವಾಸಪುರ: ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಸಿಜಿಟಿಯು ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ವಲಯಗಳಲ್ಲಿ ಶಾಸಕರ ಸ್ವಗ್ರಾಮ ಅಡ್ಡಗಲ್‌ಗೆ ಪ್ರಯಾಣ ಮಾಡಿದರು.

Advertisement

ಶ್ರೀನಿವಾಸಪುರದಲ್ಲಿ ಸಿಐಟಿಯು ತಾಲೂಕು ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ರಾಜ್ಯ ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ರೈತ ವಿರೋಧಿ ಕೃಷಿ ಸಂಬಂಧಿತ ತಿದ್ದುಪಡಿ ಮಸೂದೆ ಮತ್ತು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಮತ್ತು ಇತರೆ ತಿದ್ದುಪಡಿ ತಿರಸ್ಕರಿಸಲು ಹಾಗೂ ಸಂಘಟಿತ-ಅಸಂಘಟಿತ ಕಾರ್ಮಿಕರ 33 ಬೇಡಿಕೆಗಳ ಈಡೇರಿಕೆಗೆ ಒತ್ತಾ ಯಿಸಲು ಕೋರಿ ಪಟ್ಟಣದ ಸಿಐಟಿಯು ಕಚೇರಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು.

ನಂತರ ತಾಲೂಕು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಮಿಕರ ಬೇಡಿಕೆ ಈಡೇರಿಸಬೇಕೆಂಬ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮುಖಂಡರುಮಾತನಾಡಿ, ರಾಜ್ಯದ ಏಳಿಗೆಗಾಗಿ ದುಡಿಯುವ ವಿವಿಧ ವಿಭಾಗದ ಕಾರ್ಮಿಕರ ಹಿತ ಹಾಗೂ ಅವರ ಬದುಕು ರಕ್ಷಿಸಲು ತಮ್ಮ ಬೆಂಬಲ ಅಗತ್ಯವಾಗಿದೆ ಎಂದರು. ಪ್ರಮುಖ ಬೇಡಿಕೆಗಳ ಈಡೇರಿಕೆಗೆ ತಮ್ಮ ಬೆಂಬಲವಿರುತ್ತದೆ ಎಂಬ ವಿಶ್ವಾಸದೊಂದಿಗೆ ಮನವಿ ಪತ್ರ ಸಲ್ಲಿಸುತ್ತಿರುವುದಾಗಿ ಇದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದರು.

ಸಿಜಿಟಿಯು ಜಿಲ್ಲಾಧ್ಯಕ್ಷ ಅಮರನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ಜಿಲ್ಲಾ ಸಮಿತಿ ಸದಸ್ಯರಾದ ಈಶ್ವರಮ್ಮ, ಮುಖಂಡರಾದ ಆಂಜಲಮ್ಮ, ಎನ್‌.ನಾಗಭೂಷಣ್‌,ಸೀನಪ್ಪ, ಶಂಕರಪ್ಪ, ಪಾತಕೋಟೆ ನವೀನ್‌ ಕುಮಾರ್‌, ಪುಷ್ಪ, ರಾಧಾ, ನಾಗವೇಣಿ, ಬಿ.ರಾಧಾ, ಇಂತಿಯಾಜ್‌,ವಿಜಯಲಕ್ಷ್ಮೀ, ಆಂಜಲಪ್ಪ, ಚಾಂದ್‌ ಪಾಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next