Advertisement
ಕಸ್ತೂರಿ ರಂಗನ್ ವರದಿ ವಿರೋಧಿಸಿ ಹಿರಿಯ ಸಹಕಾರಿ ಮುಖಂಡ ಆರ್.ಎಂ.ಮಂಜುನಾಥ ಗೌಡರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಿನ ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತಪರ ಮುಖ್ಯಮಂತ್ರಿಯಿದ್ದಿದ್ದರೆ ಅದು ಬಂಗಾರಪ್ಪ, ಸಿದ್ದರಾಮಯ್ಯ ಮಾತ್ರ. ಯಡಿಯೂರಪ್ಪನವರೇನಿದ್ದರೂ ಮಠಗಳ ಪರ ಎಂದು ಲೇವಡಿ ಮಾಡಿದರು .
Related Articles
Advertisement
ಡಿಸಿಸಿ ಬ್ಯಾಂಕ್ ಲಾಭದಲ್ಲಿರುವುದು ನನ್ನ ತಪಸ್ಸು ಹಾಗೂ ಸಾಧನೆ. ರೈತರು, ಖಾಸಗಿ ಲೇವಾದೇವಿ ಹಾಗೂ ಮಂಡಿಗಳಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಸಹಕಾರಿ ಕ್ಷೇತ್ರದಿಂದಲೇ ಸಾಲ ದೊರಕುವಂತೆ ಮಾಡಲು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಕನಸು ಕಂಡೆ. ಹತ್ತು ವರ್ಷಗಳ ನಂತರ ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಸಾಧ್ಯವಾಯಿತು. ಅಂದು ಒಬ್ಬೊಬ್ಬ ರೈತನಿಗೆ ಐದು ಸಾವಿರ ರೂ. ಸಾಲ ನೀಡಲಾಗುತ್ತಿತ್ತು. ಅಂದು ಡಿಸಿಸಿ ಬ್ಯಾಂಕ್ 21 ಕೋಟಿ ಸಾಲವನ್ನು 6 ಸಾವಿರ ರೈತರಿಗೆ ನೀಡುತ್ತಿತ್ತು. ಇಂದು ನಾಲ್ಕು ಸಾವಿರ ಡಿಸಿಸಿ ಬ್ಯಾಂಕ್ ಗ್ರಾಹಕರಿದ್ದಾರೆ ಎಂದರು.
ಮಲೆನಾಡು ಥೈಲ್ಯಾಂಡ್ ಆಗಬಾರದು. ಮಲೆನಾಡು ಮಳೆನಾಡಾಗಿ ತೀರ್ಥಹಳ್ಳಿಯ ಅದ್ಭುತ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು. ಜೈ ಶ್ರೀರಾಮ್ ಎಂದ ಕೂಡಲೇ ಸಂಸ್ಕೃತಿಯಲ್ಲ. ಕೋಮುವಾದದ ಹೆಸರಿನಲ್ಲಿ ದೇಶ ಆಳುವ ದಿನ ಮುಗಿದು ಹೋಯಿತು ಎಂದರು.
ಸಮಾರೋಪ ಸಮಾರಂಭದಲ್ಲಿ, ಕಲ್ಕುಳಿ ವಿಠಲ ಹೆಗ್ಡೆ, ಹಿರಿಯ ಸಹಕಾರಿ ಎಚ್.ಎನ್. ವಿಜಯದೇವ್, ಪ್ರಗತಿಪರ ಹೋರಾಟಗಾರ ಕಲ್ಲಾಳ ಶ್ರೀಧರ್, ರಾಜ್ಯ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಸುಂದರೇಶ್ ಮತ್ತಿತರರು ಇದ್ದರು.