Advertisement
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಾದಯಾತ್ರೆ ಮೂಲಕ ಸಿದ್ದರಾಮಯ್ಯ, ಬಿಜೆಪಿ ಹಾಗೂ ಕುಮಾರಸ್ವಾಮಿ ಅವರನ್ನು ಹಣಿಯುವ ತಂತ್ರ ಮಾಡಿದ್ದಾರೆ ಎಂದರು.
ಅಸ್ತಿತ್ವ ಉಳಿಸಿಕೊಳ್ಳುವ ಪಾದಯಾತ್ರೆ ಎಂದು ಕುಟಕಿದರು. ಕೋವಿಡ್ ಸಂದರ್ಭದಲ್ಲಿ ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ.ಅಮಾಯಕರ ಆರೋಗ್ಯದ ಜೊತೆ ಕಾಂಗ್ರೆಸ್ ಆಟವಾಡುತ್ತಿದೆ. ದಿನನಿತ್ಯ ಕೋವಿಡ್, ಒಮಿಕ್ರಾನ್ ಬಗ್ಗೆ ಮಾತಾಡುತ್ತಲೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಹೈಕೋರ್ಟ್ ಗೆ ಅವರ ಭಂಡತನ ತಿಳಿಸುತ್ತೇವೆ. ಕುರ್ಚಿಗಾಗಿ ಸ್ವಾರ್ಥದಿಂದ ಪಾದಯಾತ್ರೆ ಮಾಡುವವರನ್ನು ಏನು ಮಾಡೋದು.ತಮಿಳುನಾಡಿನಲ್ಲಿ ನಿಮ್ಮದೇ ಸರ್ಕಾರ ಇದೆ, ಅಲ್ಲಿ ಹೋಗಿ ಪಾದಯಾತ್ರೆ ಮಾಡಿ, ನಿಮ್ಮ ಮುಖ್ಯಮಂತ್ರಿಗೆ ಕೇಸ್ ವಾಪಾಸು ತೆಗೆದುಕೊಳ್ಳಲು ಹೇಳಿ ಎಂದು ಶ್ರೀರಾಮುಲು ಸವಾಲು ಹಾಕಿದರು.