Advertisement
ಆಗ ಒಂದು ಕಡೆಯಿಂದ ಮಾತೊಂದು ತೂರಿ ಬಂದಿತ್ತು, “ಇಷ್ಟು ಕಷ್ಟ ಪಟ್ಕೊಂಡು ಯಾಕೆ ಬರ್ಬೆàಕು? ಮನೇಲಿದ್ರೆ ಆಗೆ? ಮನೆಯವ್ರು ತಂದು ಕೊಡ್ತಾರಪ್ಪ. ಇವ್ರಿಗೂ ತೊಂದ್ರೆ ಬೇರೆಯವ್ರಿಗೂ ತೊಂದ್ರೆ’ ಮಾತು ತೂರಿ ಬಂದತ್ತ ನೋಡಿದರೆ ತಕ್ಷಣಕ್ಕೆ ಯಾರು ಹಾಗೆ ಅಂದರೆಂದು ತಿಳಿಯಲಿಲ್ಲ. ಗೊತ್ತಾಗಿದ್ದಿದ್ದರೆ ಅವರಿಗೆ ಖಡಕ್ಕಾಗಿಯೇ ಉತ್ತರಿಸುತ್ತಿದ್ದೆ , “ಸ್ವಲ್ಪ ಬುದ್ಧಿ ಉಪಯೋಗಿಸಿ ಮಾತನಾಡಿ. ಈಗ ಕೈ ಕಾಲು ನೆಟ್ಟಗಿರುವವರಿಗೂ ನಾಳೆ ಯಾವುದೇ ರೀತಿಯ ತೊಂದರೆ ಬರಬಾರದೆಂದಿಲ್ಲ ತಿಳಿಯಿರಿ. ದುರದೃಷ್ಟವಶಾತ್ ನೀವೇ ಎಲ್ಲೋ ಬಿದ್ದು ಏಟಾಗಿ, ನಿಮ್ಮ ಎರಡೂ ಕೈಗಳ ಮೂಳೆ ಮುರಿದು ಪ್ಲಾಸ್ಟರ್ ಹಾಕಿಡಲು, ನಿಮಗೆ ಬೇರೆಯವರು ಉಣಿಸಿದರೆ ತೃಪ್ತಿಯಾಗುವುದೇ? ಎಷ್ಟು ದಿವಸ ತಾನೇ ಬೇರೊಬ್ಬರು ನಿಮಗೆ ಬೇಕಾದಂತೇ ಉಣಿಸಬಲ್ಲರು? ಹಾಗೇ ನಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಹಕ್ಕು ನಮಗಿದೆ. ನಾವು ಪರಾವಲಂಬಿಗಳಲ್ಲ’ ಎಂದು.
Related Articles
Advertisement
ಹೋಗಲಿ, ಹೋಮಿಯೋಪತಿ, ಆಯುರ್ವೆàದ ಅಥವಾ ಮನಶಾÏಸ್ತ್ರದÇÉಾದರೂ ಹೆಚ್ಚಿನ ಓದು ಮಾಡುವ ಎಂದರೆ ಅಂಕಗಳು ಉತ್ತಮವಿದ್ದರೂ ಲಿಫ್ಟ್ ಇಲ್ಲ , ರ್‍ಯಾಂಪ್ ಇಲ್ಲ ಎಂದು ಕೈಚೆಲ್ಲಬೇಕಾಯಿತು ! ಆಗ ಮೊದಲ ಬಾರಿ ಆಘಾತ ಅನುಭವಿಸಿ¨ªೆ. ಅತೀವ ನಿರಾಸೆಯಿಂದಲೇ ಬಿ.ಎಸ್ಸಿ. ಸೇರಿ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮುಂದುವರಿಸಿ, ಮುಂದೆ ಮೈಕ್ರೊಬಯೋಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಕಂಡೆ. ಅಂತಿಮ ಬಿ.ಎಸ್ಸಿ.ಯಲ್ಲಿ 84% ಬಂದಾಗ ಪಟ್ಟ ಖುಶಿ ಅಷ್ಟಿಷ್ಟಲ್ಲ. ಆದರೆ, ಮತ್ತೆ ವಿಧಿ ಮೆಟ್ಟಿಲುಗಳಲ್ಲಿ ಪಟ್ಟಾಗಿ ಕುಳಿತಿತ್ತು.
ಸರಾಗವಾಗಿ ತರಗತಿಗಳನ್ನು ಪ್ರವೇಶಿಸುವ ಸೌಲಭ್ಯಗಳು ಸಿಗದೇ ಕೈಬಿಡಬೇಕಾಯಿತು. ಕೊನೆಗೆ ಮೆಟ್ಟಿಲುಗಳ ಹಂಗಿಲ್ಲದೇ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿದೆ. ಇದು ಮನೆಯಲ್ಲಿ ತಕ್ಕಮಟ್ಟಿಗೆ ಅನುಕೂಲವಿದ್ದು, ಅಪ್ಪ, ಅಮ್ಮನ ಬೆಂಬಲವಿದ್ದು, ಆತ್ಮೀಯ ಸ್ನೇಹಿತರ ಸಹಾಯ, ಬೆಂಬಲವಿದ್ದೂ… ಅತೀವ ಅಸಹಾಯಕತೆ, ನಿರಾಸೆ, ಆಕ್ರೋಶ ಅನುಭವಿಸಿದ ನನ್ನ ಕಥೆ! ಇದಾವ ಸೌಲಭ್ಯಗಳೂ ಇಲ್ಲದ, ಕನಿಷ್ಟ ಮನೆಯವರ ಬೆಂಬಲವೂ ಸೂಕ್ತವಾಗಿ ಸಿಗದ, ಹೆತ್ತವರಿಗೆ ಆಶಯವಿದ್ದರೂ, ಸ್ಕೂಲ್/ಕಾಲೇಜಿಗೆ ಕಳುಹಿಸಲು ವಾಹನ ಸೌಲಭ್ಯಗಳನ್ನು ಕಲ್ಪಿಸಲಾಗದೆ ಆರ್ಥಿಕವಾಗಿ ಒ¨ªಾಡುವ ಬೇರೆ ಅಂಗವಿಕಲರ ಸ್ಥಿತಿ-ಗತಿಯನ್ನು ಊಹಿಸಲೂ ನನ್ನಿಂದಾಗದು.
ಈಗೇನೋ ಸರ್ಕಾರಿ ಆಫೀಸು, ಶಾಲೆಗಳಲ್ಲಿ ರ್‍ಯಾಂಪ್ ಕಾಣಸಿಗುತ್ತಿವೆ. ಆದರೂ ಕಾಲೇಜು/ಶಾಲೆಗಳಲ್ಲಿ ಮೇಲಿನ ಮಹಡಿಗಳಿಗೆ ಹೋಗಲು ಲಿಫ್ಟ್ ವ್ಯವಸ್ಥೆಗಳು ಹೇಗಿವೆ ಎಂದು ತಿಳಿಯೆ! ನಾನು ಕಲಿತಿದ್ದ ಕೆನರಾ ಡಿಗ್ರಿ ಕಾಲೇಜಿನಲ್ಲಿ. ಅಲ್ಲಿ ನನ್ನ ತಂದೆಯವರೇ ಪ್ರೊಫೆಸರ್ ಆಗಿದ್ದರು ಮತ್ತು ಅಲ್ಲಿನ ಸಹೃದಯ ಪ್ರಾಧ್ಯಾಪಕ ಮಂಡಳಿಯವರು ಆದಷ್ಟು ತರಗತಿಗಳನ್ನು ಕೆಳಗೇ ಕಲ್ಪಿಸಿಕೊಟ್ಟು ಸಹಕರಿಸಿದ್ದರು. ಹಾಗಾಗಿ, ಆದಷ್ಟು ಸಲೀಸಾಗಿ ಬಿ.ಎಸ್ಸಿ. ಮುಗಿಸಲು ಸಾಧ್ಯವಾಯಿತು. ಇಲ್ಲದಿದ್ದಲ್ಲಿ…?!
ದೈಹಿಕ/ಮಾನಸಿಕ ನ್ಯೂನ್ಯತೆಯುಳ್ಳವರಿಗೆ ವಿಕಲಚೇತನ, ವಿಶಿಷ್ಟ ಚೇತನ, ದಿವ್ಯಾಂಗ ಎಂಬೆಲ್ಲ ನಾಮ ವಿಶೇಷಣಗಳು ಚಿನ್ನದ ಸೂಜಿಯಷ್ಟೇ. ಈ ರೀತಿ ನಮ್ಮನ್ನು ಮೇಲೇರಿಸಿ, ಕೈಚೆಲ್ಲಿ ಸಾಗುವ ಮನೋಸ್ಥಿತಿಯಿಂದ ಸಮಾಜ, ಸರ್ಕಾರ ಎಲ್ಲರೂ ಹೊರಬರಬೇಕಾಗಿದೆ. ಮಾಸಾಶನ, ಪಿಂಚಣಿ ವ್ಯವಸ್ಥೆ ಎಲ್ಲವೂ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆಯೇ. ಆದರೆ, ಬಹು ಮುಖ್ಯವಾಗಿ ನಮ್ಮಂಥವರಿಗೆ ಬೇಕಾಗಿರುವುದು ಸೂಕ್ತ ಶಿಕ್ಷಣ ಮತ್ತು ಗೌರವಯುತ ಬದುಕು. ಅವರೇ ಸ್ವಯಂ ತಮ್ಮ ಮನೆಯಿಂದ ಹೊರಬಂದು ಉದ್ಯೋಗ ಮಾಡಿಕೊಂಡು, ತಮ್ಮ ವ್ಯವಹಾರ ಮಾಡಿಕೊಳ್ಳುತ್ತ , ತಮ್ಮಿಷ್ಟದ ರೀತಿಯ ವಸ್ತುಗಳನ್ನು ಕೊಳ್ಳಲು, ಬೇಕಾದ ಕಡೆ ನಿರಾಯಾಸವಾಗಿ ಸಾಗಲು, ಸ್ವಾವಲಂಬಿಗಳಾಗಿ ಬದುಕಿ ಆತ್ಮವಿಶ್ವಾಸ ಗಳಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಮೊತ್ತಮೊದಲು ನಮ್ಮ ಸುತ್ತಲಿನ ಸಮಾಜ ನಮ್ಮೊಂದಿಗೆ ಧ್ವನಿಯೆತ್ತಬೇಕು.
– ತೇಜಸ್ವಿನಿ ಹೆಗಡೆ