Advertisement

ಮೈಷುಗರ್‌ ಉಳಿವಿಗೆ ಪ್ಯಾಕೇಜ್‌ ಅಗತ್ಯ: ನಿಖಿಲ್‌

04:13 AM May 17, 2020 | Team Udayavani |

ಬೆಂಗಳೂರು: ರೈತರ ವಿರೋಧ, ರೈತಸಂಘದ ಆಕ್ಷೇಪ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಎಚ್ಚರಿಕೆಗಳಿಗೆ ಮಣಿದಿರುವ ರಾಜ್ಯ ಸರ್ಕಾರ ಮಂಡ್ಯದ ಮೈಷುಗರ್‌ ಕಂಪನಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ನಿರ್ಧಾರದಿಂದ  ಹಿಂದೆ ಸರಿದಿರುವುದು ಸ್ವಾಗತಾರ್ಹ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮೈಷುಗರ್‌ ಕಂಪನಿ ಸ್ಥಾಪನೆ ಹಿಂದೆ ವಿಶ್ವೇಶ್ವರಯ್ಯನವರ ದೂರದೃಷ್ಟಿ, ಅವರ  ಕಾಲಮಾನದ ಹೆಗ್ಗುರುತು. ಮೈಷುಗರ್‌ ಕಂಪನಿಯ ಉಳಿವಿಗೆ ಯಾವುದೇ ಸರ್ಕಾರಗಳು ಶ್ರಮಿಸಬೇಕು. ಅದನ್ನು ಯಾವುದೇ ಹಂತದಲ್ಲಾದರೂ ಉಳಿಸಿಕೊಳ್ಳುವ ಪ್ರಯತ್ನಗಳಾಗಬೇಕು.  ಮೈಷುಗರ್‌ ಎಂಬುದು ಬರಿಯ ಕಾರ್ಖಾನೆಯಲ್ಲ.  ಅದು ಅಲ್ಲಿನ ರೈತರ ಬದುಕು ಎಂಬುದುನ್ನು ಸರ್ಕಾರಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಬ್ಬನ್ನು ಅರೆಯುವ ಸಾಮ ರ್ಥಯದ ಆಧಾರದ ಮೇಲೆ ಸರ್ಕಾರ ವಿತರಣೆ ಮಾಡ ಬೇಕು. ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಹೇಳಿ ದ್ದಾರೆ. ಸರ್ಕಾರ ಕಾರ್ಖಾನೆಯ ಕಾಯಕಲ್ಪಕ್ಕೆ ಪ್ಯಾಕೇಜ್‌ ಘೋಷಿಸಬೇಕು. ಅಂತ ಕಾರ್ಯವನ್ನು ಕುಮಾರಸ್ವಾಮಿ ಸರ್ಕಾರ ಮಾಡಿತ್ತು. ಅದನ್ನಾದರೂ ಮುಂದುವರಿಸಲಿ. ಅಲ್ಲಿನ  ರೈತರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಆಶಿಸುತ್ತೇನೆ ಎಂದು ನಿಖಿಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next