Advertisement
ಪಚ್ಚನಾಡಿಯಲ್ಲಿ ಬೆಂಕಿ ಶಮನಗೊಂಡಿ ದ್ದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ನಿಂತಿದ್ದ ಬಯೋಮೈನಿಂಗ್ ಪ್ರಕ್ರಿಯೆ ಮತ್ತೆ ಆರಂಭಗೊಂಡಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಬಯೋಮೈನಿಂಗ್ ಅನ್ನು ಒಂದು ಯುನಿಟ್ ಸ್ಥಾಪಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಕಸದಿಂದ ಜಲ್ಲಿ ಕಲ್ಲು, ಗೊಬ್ಬರ ಸಹಿತ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದೆ.
ಪಚ್ಚನಾಡಿಯ ಮಂದಾರ ಬಳಿ ರಾಶಿ ಬಿದ್ದ ತ್ಯಾಜ್ಯವನ್ನು ಬಯೋಮೈನಿಂಗ್ ವ್ಯವಸ್ಥೆಯ ಮೂಲಕ ತೆರವುಗೊಳಿಸಲಾಗುತ್ತಿದೆ. “ನ್ಯಾಕಾಫ್’ ಎಂಬ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದ್ದು, ಅವರಿಗೆ 4 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ ಪೂರ್ಣಗೊಳಿಸುವ ಅವಧಿ ಎರಡು ವರ್ಷ ಇದ್ದರೂ ಮಳೆಗಾಲದಲ್ಲಿ ಈ ಪ್ರಕ್ರಿಯೆ ನಿರ್ವಹಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ 4 ವರ್ಷಗಳವರೆಗೆ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಒಂದು ವರ್ಷಗಳ ಕಡಿತಕ್ಕೆ ಪಾಲಿಕೆ ಚಿಂತನೆ ನಡೆಸುತ್ತಿದೆ. ಈ ಮೂಲಕ ಪಚ್ಚನಾಡಿಯಲ್ಲಿ ಆಗಿದ್ದಾಗ್ಗೆ ಆಗುವ ಅನಾಹುತ ತಪ್ಪಿಸಲು ಕ್ರಮ ವಹಿಸಲಾಗಿದೆ.
Related Articles
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲವು ದಿನಗಳ ಹಿಂದೆ ಬೆಂಕಿತಗುಲಿದ್ದು, ಸದ್ಯ ಶಮನಗೊಂಡಿದೆ. ಆದರೂ ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗುತ್ತಿದೆ. ಈಗಗಾಲೇ ಸುಮಾರು 9 ಲಕ್ಷ ಟನ್ ಕಸ ರಾಶಿ ಬಿದ್ದಿದ್ದು, ಸಂಸ್ಕರಣೆಗೆ ಬಯೋಮೈನಿಂಗ್ ವಿಧಾನ ಆರಂಭಗೊಂಡಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 4 ವರ್ಷ ಅಗತ್ಯವಿದೆ. ಆದರೆ ಈ ಕಾಮಗಾರಿಗೆ ವೇಗ ಒದಗಿಸಿ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್ ಶ್ರೀಧರ್, ಮನಪಾ ಆಯುಕ್ತರು
Advertisement
ನವೀನ್ ಭಟ್ ಇಳಂತಿಲ