Advertisement

ಬಾಳಗಾರಿನ  ಪಂಚವಟಿಯಲ್ಲಿ ಮಾಯಾಮೃಗ!

04:56 PM Oct 16, 2021 | Team Udayavani |

ಶಿರಸಿ: ವಿಜಯ ದಶಮಿ ಸೇವಾ ರತ್ನ ಮಾಹಿತಿ ಕೇಂದ್ರ‌ ಕಾನಸೂರು ಹಾಗೂ  ಜೋಗಿಮನೆ ಬಳಗ ಹಮ್ಮಿಕೊಂಡ  “ಪಂಚವಟಿ-ಮಾಯಾಮೃಗ”  ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮನ ಗೆದ್ದಿತು.

Advertisement

ಯಕ್ಷಗಾನ ಮೇಳವನ್ನು ನಡೆಸಿದ್ದ ಜೋಗಿಮನೆಯಲ್ಲಿ ಆರು ದಶಕಗಳ ಬಳಿಕ ವರ್ಷಗಳ ಮತ್ತೆ ಯಕ್ಷಗಾನ ತಾಳಮದ್ದಲೆ ಇಲ್ಲಿನ ಜೋಗಿಮನೆ ಮನೆಯಂಗಳದಲ್ಲಿ ತಾಳ, ಚಂಡೆ‌ಮದ್ದಲೆ ಝೇಂಕರಿಸಿತು.

ಅರ್ಥಧಾರಿಗಳಾಗಿ ಕಲಾವಿದರಾದ ಆರ್.ಟಿ.ಭಟ್, ನಿರಂಜನ ಜಾಗನಳ್ಳಿ, ಚಂದ್ರಶೇಖರ ಹೆಗಡೆ ಮಾದ್ನಕಳ್ಳು  ಗಣಪತಿ ಹೆಗಡೆ, ಕಬ್ಬಿನಮನೆ, ಸುಬ್ರಾಯ ಹೆಗಡೆ, ಕೆರೆಕೊಪ್ಪ, ವಿದ್ವಾನ್ ರಾಮಚಂದ್ರ ಭಟ್ ಶಿರಳಗಿ, ರತ್ನಾಕರ ಭಟ್ ಕಾನಸೂರು ಮಾತಿನ ಮಂಟಪ ಕಟ್ಟಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಟ್ ಭರತೋಟ, ಮೃದಂಗ ವಾದಕರಾಗಿ ಗಜಾನನ ಹೆಗಡೆ ಕಂಚಿಕೈ, ಚಂಡೆವಾದಕರಾಗಿ ಚಂದ್ರಶೇಖರ ಭಟ್, ಓಣಿವೆಘ್ನೇಶ್ವರ ಭಾಗವಹಿಸಿದರು.  ಸಂಯೋಜಕ ಡಾ.ಬಾಲಕೃಷ್ಣ ಹೆಗಡೆ ಕಲಾವಿದರನ್ನು ಸ್ವಾಗತಿಸಿದರು. ಅನಂತ ರಾಮಕೃಷ್ಣ ಹೆಗಡೆ ಕಲಾವಿದರನ್ನು ಗೌರವಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next