ದೇರಳಕಟ್ಟೆ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಶನ್ ಎಂಜಿನಿಯರಿಂಗ್ ವತಿ ಯಿಂದ ಐಟಿ ವರ್ಲ್ಡ್ನಲ್ಲಿ ಡಿಜಿಟಲ್ ಅಡ್ಡಿ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಉದ್ಯಮಿ ಶೇಕ್ ಮೊದೀನ್ ಕೆ.ಎಂ. ಅವರು ಐಟಿ ವರ್ಲ್ಡ್ನಲ್ಲಿ ಡಿಜಿಟಲ್ ಅಡ್ಡಿ ಎಂಬ ವಿಷಯದ ಬಗ್ಗೆ ತಾಂತ್ರಿಕ ಚರ್ಚೆ ಮಾಡಿದರು.
ಇ.ಸಿ. ವಿಭಾಗ ಮುಖ್ಯಸ್ಥ ಡಾ| ಅಬ್ದುಲ್ ರೆಹಮಾನ್, ಉಪ ಪ್ರಾಂಶುಪಾಲ ಡಾ| ರಮಿಸ್ ಎಂ.ಕೆ., ಅಕಾಡೆಮಿಕ್ಸ್ ನಿರ್ದೇಶಕ ಡಾ| ಸಫìರಾಜ್ ಹಾಶಿಂ ಪ್ರಸ್ತುತ ಸನ್ನಿವೇಶದಲ್ಲಿ ಅಡ್ಡಿಪಡಿಸುವ ತಂತ್ರಜ್ಞಾನದ ಬಗ್ಗೆ ಕೆಲವು ಅಂಶಗಳನ್ನು ವಿವರಿಸಿದರು.
ಶೈಕ್ಷಣಿಕ ವರ್ಷದ 2018-19ರಲ್ಲಿ ಅತ್ಯುತ್ತಮ ಪ್ರದರ್ಶನಗೈದ ವಿದ್ಯಾರ್ಥಿ ಗಳು, ಮಿನಿ ಪ್ರಾಜೆಕ್ಟ್ ಪ್ರದರ್ಶನದ ವಿಜೇತರು ಮತ್ತು ವಿವಿಧ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಸಿವಿಲ್ ವಿಭಾಗ ಮುಖ್ಯಸ್ಥ ಡಾ| ಪಾಲಾಕ್ಷಪ್ಪ, ಪ್ರೊ| ಮಹಮ್ಮದ್ ಹುಸೈನ್, ಪ್ರೊ| ಮಹಮ್ಮದ್ ಝಕಿರ್, ಪ್ರೊ| ಟೆನ್ಸನ್ ಜೋಸ್ ಮತ್ತು ಪ್ರೊ| ಮಹಮ್ಮದ್ ಸಲೀಮ್ ಉಪಸ್ಥಿತರಿದ್ದರು. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮುನಿಕೇಷನ್ ವಿಭಾಗದ ಬೋಧಕ ಸದಸ್ಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೊ|ಅಮ್ಜದ್ ಖಾನ್ ಸ್ವಾಗತಿಸಿದರು. ಮಹಮ್ಮದ್ ರಷಾದ್ ನಿರೂಪಿಸಿದರು. ಪ್ರೊ| ಚಂದನ ಬಿ. ಆರ್.ವಂದಿಸಿದರು.