ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ಕೋಚ್, ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಈ ಜವಾಬ್ದಾರಿ ಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಸಿಂಧು ಇತ್ತೀಚಿನ ಪಂದ್ಯಾವಳಿಗಳಲ್ಲೆಲ್ಲ ನಿರಾಶಾ ದಾಯಕ ಪ್ರದರ್ಶನ ನೀಡುತ್ತಿದ್ದು, ಓರ್ವ ಕೋಚ್ ಆಗಿ ತಾನು ಈ ಜವಾಬ್ದಾರಿ ಹೊರಬಯಸುತ್ತೇನೆ ಎಂಬುದಾಗಿ ಪಾರ್ಕ್ ಟೇ ಸಾಂಗ್ ಹೇಳಿದ್ದಾರೆ. ಜತೆಗೆ, ಸಿಂಧು ನೂತನ ತರಬೇತುದಾರರೊಬ್ಬರನ್ನು ಬಯಸಿದ್ದಾರೆ ಎಂದಿದ್ದಾರೆ.
“ಇತ್ತೀಚಿನ ಎಲ್ಲ ಕೂಟಗಳಲ್ಲೂ ಸಿಂಧು ನಿರಾಶಾ ದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಇದರ ಹೊಣೆ ಯನ್ನು ಕೋಚ್ ಆದ ನಾನೇ ಹೊರಬೇಕಿದೆ. ಸಿಂಧು ಕೂಡ ಬದಲಾವಣೆ ಬಯಸಿದ್ದಾರೆ. ಅವರು ನೂತನ ಕೋಚ್ ಅಪೇಕ್ಷೆಯಲ್ಲಿದ್ದಾರೆ. ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ.
ಮುಂದಿನ ಒಲಿಂಪಿಕ್ಸ್ ತನಕ ನಾನು ಸಿಂಧು ಕೋಚ್ ಆಗಿ ಮುಂದುವರಿಯಲಾಗದ ಬಗ್ಗೆ ವಿಷಾದಿಸುತ್ತೇನೆ. ದೂರದಿಂದಲೇ ಅವರನ್ನು ಬೆಂಬಲಸುತ್ತೇನೆ’ ಎಂಬುದಾಗಿ ಪಾರ್ಕ್ ಟೇ ಸಾಂಗ್ ಪೋಸ್ಟ್ ಮಾಡಿದ್ದಾರೆ.
Related Articles
ಸಾಂಗ್ ಮಾರ್ಗದರ್ಶನದಲ್ಲೇ ಪಿ.ವಿ. ಸಿಂಧು ಟೋಕಿಯೊ ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.