Advertisement

ಗೋಪಿಚಂದ್‌ ಅಕಾಡೆಮಿಗೆ ಮರಳಿದ ಸಿಂಧು

12:30 AM Mar 17, 2019 | |

ಹೈದರಾಬಾದ್‌: “ಸಾಯ್‌ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ’ಯಿಂದ 9 ತಿಂಗಳು ದೂರವಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಮನಸ್ಸು ಬದಲಾಯಿಸಿದ್ದಾರೆ. ತಮ್ಮ ವೃತ್ತಿಜೀವನದ ಭವಿಷ್ಯವನ್ನು ಗಮನಿಸಿ ಮತ್ತೆ ಅಕಾಡೆಮಿಗೆ ಮರಳಿದ್ದಾರೆ. ದೂರಾಗಿದ್ದ ಆ 9 ತಿಂಗಳಲ್ಲಿ ಸಿಂಧು ಬಿಡಬ್ಲ್ಯುಎಫ್ ವಿಶ್ವ ಸರಣಿ ಫೈನಲ್‌ನಲ್ಲಿ ಚಿನ್ನ ಜಯಿಸಿದ್ದನ್ನು ಹೊರತುಪಡಿಸಿದರೆ, ಬಹುತೇಕ ಕೂಟಗಳಲ್ಲಿ ಸೋತಿದ್ದರು.

Advertisement

ಕಳೆದ ಜೂನ್‌ನಲ್ಲಿ ಗೋಪಿಚಂದ್‌ ಅವರಲ್ಲಿ ಮನವಿ ಮಾಡಿದ ಸಿಂಧು, ತನಗೆ ಪ್ರತ್ಯೇಕವಾಗಿ ತರಬೇತಿ ನೀಡುವಂತೆ ಕೇಳಿಕೊಂಡಿದ್ದರು. ಅದನ್ನು ಒಪ್ಪಿಕೊಂಡಿದ್ದ ಗೋಪಿ, ಸಾಯ್‌ ಗೋಪಿಚಂದ್‌ ಅಕಾಡೆಮಿಯಿಂದ ಕೇವಲ ಒಂದು ಕಿ.ಮೀ. ದೂರವಿರುವ ತಮ್ಮದೇ “ಗೋಪಿಚಂದ್‌ ಅಕಾಡೆಮಿ’ಯಲ್ಲಿ ತರಬೇತಿ ನೀಡಿದರು. ಇದರಿಂದ ನಿರೀಕ್ಷಿತ ಫ‌ಲಿತಾಂಶ ಸಾಧಿಸಲು ಸಿಂಧುಗೆ ಸಾಧ್ಯವಾಗಲಿಲ್ಲ.

ಸಿಂಧು ಪ್ರತ್ಯೇಕ ತರಬೇತಿಗೆ ಆಗ್ರಹಿಸಿದ್ದಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಇದಕ್ಕೆ ಕಾರಣ ಸೈನಾ ನೆಹ್ವಾಲ್‌ ಇರಬಹುದೇ ಎಂಬ ಅನುಮಾನವಿದೆ. ಹಿಂದೆ ಗೋಪಿಚಂದ್‌ ಅವರಿಂದಲೇ ತರಬೇತಿ ಪಡೆಯುತ್ತಿದ್ದ ಸೈನಾ, ಗೋಪಿಚಂದ್‌ ತನಗೆ ಆದ್ಯತೆ ನೀಡಿ ತರಬೇತಿ ನೀಡುತ್ತಿಲ್ಲ ಎಂದು ಮುನಿಸಿಕೊಂಡು ಖಾಸಗಿ ತರಬೇತಿ ಶುರು ಮಾಡಿದ್ದರು. 

ಆದರೆ ಕಳೆದ ವರ್ಷ ಅವರು ಮತ್ತೆ ಗೋಪಿಚಂದ್‌ ಕೇಂದ್ರಕ್ಕೆ ಮರಳಿದ್ದರು. ಗೋಪಿ ತನಗಿಂತ ಸಿಂಧುಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸೈನಾಗೆ ಸಿಟ್ಟು ತರಿಸಿತ್ತು ಎಂಬ ಊಹಾಪೋಹಗಳೂ ಹರಡಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next