Advertisement

ಪ.ಜಾತಿ, ವರ್ಗದ ಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ

08:40 AM Mar 29, 2018 | Team Udayavani |

ಕಾರ್ಕಳ: ಪ.ಜಾತಿ, ವರ್ಗದ ಸಭೆಯ ಬಗ್ಗೆ  ಮುಂಚಿತವಾಗಿ ತಿಳಿಸಿದರೂ ಅಧಿಕಾರಿಗಳು ಭಾಗವಹಿಸದೆ ದಲಿತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದಲಿತ ಮುಖಂಡ ಅಣ್ಣಪ್ಪ ನಕ್ರೆ ಆರೋಪಿಸಿದ್ದಾರೆ.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಮಾ. 27ರಂದು ನಡೆದ ಕಾರ್ಕಳ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷಗಳಿಂದ ನಡೆದ ಸಭೆಯಲ್ಲಿ ದಲಿತರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಇಂತಹ ಸಭೆಯಲ್ಲಿ ಚರ್ಚಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದರು.

ಕೇವಲ ಸ್ಪಷ್ಟೀಕರಣ ಸಾಕೇ?
ಸುನೀತ ಅಂಡಾರು ಅವರು ಈ ಹಿಂದಿನ ಸಭೆಯಲ್ಲಿ ವರಂಗ ಪಿಡಿಒ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಅದಕ್ಕೆ ಪಿಡಿಒ ಸ್ಪಷ್ಟೀಕರಣ ನೀಡಿರುವುದನ್ನು ಸಮಾಜ ಕಲ್ಯಾಣಾಧಿಕಾರಿ ಜಯ ಕುಮಾರ್‌ ಸಭೆಗೆ ಮಂಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್‌ ಸಾಣೂರು, ಸಭೆಯಲ್ಲಿ ಮಂಡಿಸಿದ ಸಮಸ್ಯೆಗೆ ಮಾಧ್ಯಮಗಳಲ್ಲಿ ಸ್ಪಷ್ಟೀಕರಣ ನೀಡುವುದು ಸರಿಯೇ? ಎಂದರು.

ಪ್ರಭಾರ ತಹಶೀಲ್ದಾರ್‌ ಮಂಜುನಾಥ ಹೆಗ್ಡೆ ಪ್ರತಿಕ್ರಿಯಿಸಿ, ಪಿಡಿಒ ವಿರುದ್ಧª ತನಿಖೆ ನಡೆಸಿ ಕ್ರಮ ಕೈಗೊಳ್ಳಲು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯಲು ಸೂಚಿಸಿದರು.

Advertisement

ಸುಂದರ ನಲ್ಲೂರು ಹಕ್ಕುಪತ್ರದ ಕುರಿತು ಮಾತನಾಡಿ, ನಲ್ಲೂರು ಪರಪ್ಪಾಡಿಯಲ್ಲಿ ಡೀಮ್ಡ್ ಅರಣ್ಯದಲ್ಲಿ ಹಲವರಿಗೆ  ಹಕ್ಕುಪತ್ರ ವಿತರಿಸಿದ್ದಾರೆ. ಆದರೆ ನಮ್ಮ ಸಮುದಾಯದ ಜನತೆ ಕೇಳಿದರೆ ಡೀಮ್ಡ್ ಅರಣ್ಯ  ಎಂದು ಎನ್ನುತ್ತಾರೆ ಇದು ನ್ಯಾಯವೇ ಎಂದರು. 

ತಹಶೀಲ್ದಾರ್‌ ವೃತ್ತ ನಿರೀಕ್ಷಕರಲ್ಲಿ ಪ್ರಶ್ನಿಸಿ, ಡೀಮ್ಡ್ ಅರಣ್ಯದಲ್ಲಿ ಹಕ್ಕುಪತ್ರ ನೀಡಿರುವ ಬಗ್ಗೆ ಮಾಹಿತಿ ನೀಡಿದರೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದೆಂದರು.ಅಣ್ಣಪ್ಪ ನಕ್ರೆ ಮಾತನಾಡಿ, ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅನುದಾನ ಮಂಜೂರುಗೊಂಡು ಮೂರು ವರ್ಷವಾದರೂ ಯಾವುದೇ ಪ್ರಗತಿಯಾಗಿಲ್ಲ ಎಂದರು. ಅಶೋಕ್‌ ಸಾಣೂರು ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಮಂಜೂರುಗೊಂಡ ಹಿಂದುಳಿದ ವರ್ಗಗಳ ಸಮುದಾಯ ಭವನದ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಆದರೆ ನಮ್ಮ ಕಟ್ಟಡ ಕಡೆಗಣಿಸಲ್ಪಟ್ಟಿದೆ ಎಂದರು.  ವಿಟuಲ, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಜಯ ಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next