ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಕಟ್ಟಡದ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್‌ಇಂಕ್ (ಜಿಬಿಸಿಐ) ನೀಡುವ ಪ್ರತಿಷ್ಠಿತ ಪೀರ್ (ಪರ್ಫಾರ್ಮೆನ್ಸ್ ಎಕ್ಸೆಲೆನ್ಸ್ ಇನ್ ಎಲೆಕ್ಟ್ರಿಸಿಟಿ ರಿನಿವಲ್) ಪ್ಲಾಟಿನಂ ಸರ್ಟಿಫಿಕೇಷನ್ ಪಡೆದಿದೆ.
ಈ ಮಾನ್ಯತೆಯಿಂದ ಬಿಐಎಎಲ್ ತನ್ನ ವಿಮಾನ ನಿಲ್ದಾಣದ ವಿದ್ಯುತ್ಛಕ್ತಿ ಮೂಲಸೌಕರ್ಯಕ್ಕೆ 92/100 ಅಂಕ ಪಡೆದು ವಿಶ್ವದಲ್ಲೇ ಮೊದಲ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿದೆ.
ಬಿಐಎಎಲ್ ವಿಮಾನ ನಿಲ್ದಾಣದ ವಿದ್ಯುತ್ಛಕ್ತಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಪೀರ್ ಪ್ರಮಾಣೀಕರಣ ಪಡೆದಿದ್ದು ಇದು ಜಿಬಿಸಿಐನ ಕಠಿಣ ಪ್ರಮಾಣೀಕರಣ ಮತ್ತು ಪರಿಶೀಲನೆಯ ಪ್ರಕ್ರಿಯೆಗೆ ಒಳಪಟ್ಟಿತ್ತು. ಜಿಬಿಸಿಐ ವಿಶ್ವದ ಮುಂಚೂಣಿಯ ಸುಸ್ಥಿರತೆ ಮತ್ತು ಆರೋಗ್ಯ ಪ್ರಮಾಣೀಕರಣ ಹಾಗೂ ಅಧಿಕೃತತೆಯನ್ನು ನೀಡುವ ಸಂಸ್ಥೆಯಾಗಿದೆ ಮತ್ತು ಲೀಡ್ ಹಸಿರು ಕಟ್ಟಡ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಬಿಐಎಎಲ್ ಸುಸ್ಥಿರವಾಗಿ ನಿರ್ಮಿಸಲು ತನ್ನ ಬದ್ಧತೆಯ ಮೂಲಕ ಅಸಾಧಾರಣ ಕಾರ್ಯಕ್ಷಮತೆ ನಿರೂಪಿಸಿದೆ. ಇದು 6.8 ಮೆಗಾವ್ಯಾಟ್‌ನ ಸ್ಥಳದಲ್ಲಿ ಸೋಲಾರ್ ಪಿವಿ ವ್ಯವಸ್ಥೆಯನ್ನು ಹೊಂದಿದ್ದು, ಅದು ಗ್ರಿಡ್ ವೈಫಲ್ಯ ಮತ್ತು ದೀರ್ಘಾವಧಿ ವಿದ್ಯುತ್ ಸ್ಥಗಿತಗೊಂಡಾಗ
ನೆರವಾಗುತ್ತದೆ ಮತ್ತು ಇದರ ಶೇ.100ರಷ್ಟು ಶಕ್ತಿಯು ನವೀಕರಿಸಬಲ್ಲ ಶಕ್ತಿಯಾಗಿದೆ.
ಒಟ್ಟಾರೆಯಾಗಿ ಆಧುನಿಕ ವ್ಯವಸ್ಥೆಯು ವಿಮಾನ ನಿಲ್ದಾಣಕ್ಕೆ 14.7 ಮಿಲಿಯನ್ ಯೂನಿಟ್‌ಗಳ ವಿದ್ಯುತ್ಛಕ್ತಿ ಉಳಿತಾಯ ಮಾಡಲು ನೆರವಾಗಿದೆ. ಬಿಐಎಎಲ್‌ನ ಎಂ.ಡಿ.ಮತ್ತು ಸಿಇಒ ಹರಿ ಮರಾರ್, ಮಾತನಾಡಿ “ವಿದ್ಯುತ್ಛಕ್ತಿ ಉಳಿಸುವಲ್ಲಿ ನಮ್ಮ ಸತತ ಪರಿಶ್ರಮಕ್ಕೆ ಜಿಬಿಸಿಐನಿಂದ ಈ ಪುರಸ್ಕಾರ ಪಡೆದಿರುವುದು ನಮಗೆ ಬಹಳ ಹೆಮ್ಮೆತಂದಿದೆ.
ಇದನ್ನೂ ಓದಿ : ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ : ಮೇಲ್ಸೇತುವೆ, ಬ್ರಿಡ್ಜ್ ಗಳ ಪರೀಕ್ಷೆಗೆ ನಾಗರಿಕರ ಆಗ್ರಹ
ವಿಶ್ವಮಟ್ಟದ ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯಾಗಿ ಬಿಐಎಎಲ್ ಸ್ಥಳದಲ್ಲಿಯೇ ನವೀಕರಿಸಬಲ್ಲ ವಿದ್ಯುತ್ಛಕ್ತಿ ಉತ್ಪಾದನಾ ವ್ಯವಸ್ಥೆಗಳನ್ನು ಸ್ಥಾಪಿಸಲು, ಹೊರಗಿನಿಂದ ನವೀಕರಿಸಬಲ್ಲ ವಿದ್ಯುತ್ ಪಡೆಯಲು ಮತ್ತು 2020-21ರ ವೇಳೆಗೆ ನೆಟ್ ಎನರ್ಜಿ ನ್ಯೂಟ್ರಲ್ ಆಗಿಸುವ ದೀರ್ಘಾವಧಿಗುರಿ ಸಾಧಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಪೀರ್ ಪ್ಲಾಟಿನಂ ರೇಟಿಂಗ್ ಮಾನ್ಯತೆಯು ನಮ್ಮ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲಿದೆ ಎಂದರು.