Advertisement

ವಾರದಲ್ಲಿ ಆಕ್ಸಿಜನ್‌ ಘಟಕ ಕಾಮಗಾರಿ ಪೂರ್ಣ: ರಮೇಶ್‌

08:26 PM Jun 25, 2021 | Team Udayavani |

ಗೋಕಾಕ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 1.5 ಕೋಟಿ ವೆಚ್ಚದಲ್ಲಿ ವಿಎಸ್‌ಎ ತಂತ್ರಜ್ಞಾನವುಳ್ಳ 500 ಎಲ್‌.ಪಿ.ಎಂ ಸಾಮರ್ಥ್ಯದ ಆನ್‌ ಸೈಟ್‌ ಆಕ್ಸಿಜನ್‌ ಜನರೇಟರ್‌ ಯುನಿಟ್‌ ನಿರ್ಮಾಣ ಕಾಮಗಾರಿಯನ್ನು ಗುರುವಾರ ಶಾಸಕ ರಮೇಶ ಜಾರಕಿಹೊಳಿ ವೀಕ್ಷಿಸಿದರು.

Advertisement

ನಗರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್‌ ಉತ್ಪಾದನಾ ಘಟಕ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕ ರಮೇಶ, ಪ್ರಾಯೋಗಿಕವಾಗಿ ತಾಲೂಕಾ ಆಸ್ಪತ್ರೆಯಲ್ಲಿ ಪಿಎಸ್‌ಎ ತಂತ್ರಜ್ಞಾನವುಳ್ಳ 500 ಎಲ್‌.ಪಿ.ಎಂ ಸಾಮರ್ಥ್ಯದ ಆಕ್ಸಿಜನ್‌ ಉತ್ಪಾದನಾ ಘಟಕ ಅಳವಡಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆ ನಿಟ್ಟಿನಲ್ಲಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕದ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಬರುವ ಒಂದು ವಾರದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊರೊನಾ ಮೂರನೇ ಅಲೆ ಎದುರಿಸಲು ಈ ಆಕ್ಸಿಜನ್‌ ಪ್ಲಾಂಟ್‌ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯರಾದ ಟಿ.ಆರ್‌.ಕಾಗಲ್‌, ಮಡೆಪ್ಪ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ತಾಲೂಕು ಆರೋಗ್ಯಾ ಧಿಕಾರಿಡಾ. ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಕೋಣಿ, ಡಾ. ಬಾಗಲಕೋಟೆ, ಡಾ.ಅಶೋಕ ಜಿರಗ್ಯಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next