Advertisement
ನಗರದ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ವೈದ್ಯರ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ನೀಡುವ ವಿಚಾರದಲ್ಲಿ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆಮ್ಲಜನಕವನ್ನು ಎಲ್ಲಾ ರಾಜ್ಯಗಳಿಗೂವಿತರಿಸಲು ಕ್ರಮ ಕೈಗೊಂಡಿದೆ. ರೆಮ್‌ಡಿಸಿವಿಯರ್ ಹೊರಗಡೆ ಮಾರಾಟ ಆಗುತ್ತಿರುವ ಬಗ್ಗೆಯೂ ದೂರುಕೇಳಿಬರುತ್ತಿದೆ. ಇದಕ್ಕೆಲ್ಲ ಅವಕಾಶ ನೀಡದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ: ಎಲ್ಲಾ ವೈದ್ಯರು ಉತ್ತಮ ಕೆಲಸ ಮಾಡಿದರೂ ಯಾರೋ ಒಬ್ಬರು ಕೆಟ್ಟದಾಗಿ ನಡೆದುಕೊಂಡರೆ ಇಡೀ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ. ಮೊದಲ ಅಲೆ ಸಂದರ್ಭದಲ್ಲಿಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಸೋಕಿತರು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು, ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಂತಹದ್ದಕ್ಕೆ ಆಸ್ಪದ ನೀಡಬೇಡಿ ಎಂದು ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ: ಕೋವಿಡ್ ರೋಗಿಗಳನ್ನು ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡಬೇಕು.ಎಲ್ಲಾ ತಾಲೂಕುಗಳಲ್ಲಿ ಪಕ್ಷದಿಂದ ಎರಡ್ಮೂರು ಸ್ವಯಂಸೇವಕರನ್ನು ಗುರುತಿಸಿದ್ದೇವೆ. ಅವರ ಸಹಕಾರದೊಂದಿಗೆ ಆಶಾ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಕೋವಿಡ್ ಲಕ್ಷಣವುಳ್ಳವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ ಗುಣಪಡಿಸಬೇಕು. ಇಲ್ಲಿ ಆಗದಿದ್ದ ಮೇಲೆತಾಲೂಕು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ಟಾಫ್ ಗಳಿಗೆ ವಾಹನದ ವ್ಯವಸ್ಥೆ: ಲಾಕ್‌ಡೌನ್‌ನಿಂದ ವಾಹನ ಇಲ್ಲದೆ ನರ್ಸ್‌ಗಳು ಬರಲು ಆಗಲ್ಲ ಎಂದು ಹೇಳಿದ್ದಾರೆ. ಯಾರಿಗೆ ಎಲ್ಲಿಂದ ವಾಹನ ವ್ಯವಸ್ಥೆ ಬೇಕು ಎಂಬ ಮಾಹಿತಿ ನೀಡಿದರೆ ನಾವೇ ವಾಹನದ ವ್ಯವಸ್ಥೆ ಮಾಡುತ್ತೇವೆ. ಕೆಜಿಎಫ್‌ನಿಂದ 40, ಮುಳಬಾಗಿಲಿ ನಿಂದ 10, ಬೆಂಗಳೂರಿನಿಂದ 8 ಮಂದಿಗೆ ಕರೆದು ಕೊಂಡು ಬಂದು ವಾಪಸ್ ಹೋಗಲು ವ್ಯವಸ್ಥೆ ಮಾಡುತ್ತೇವೆ ಎಂದು ವಿವರಿಸಿದರು.
ಜಿಲ್ಲಾ, ತಾಲೂಕು ಆಸ್ಪತ್ರೆಗೆ ಡೀಸಿ, ಜನಪ್ರತಿನಿಧಿಗಳು ಯಾವುದೇ ಸಂದರ್ಭದಲ್ಲೂ ಭೇಟಿ ನೀಡುತ್ತೇವೆ ಅಚಾತುರ್ಯ, ರೋಗಿಗಳ ಜತೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಸಿಎಂ, ಆರೋಗ್ಯ ಸಚಿವ ಸುಧಾಕರ್ ಜತೆ ಮಾತನಾಡಿ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿದ್ದೇವೆ. ಆರೋಗ್ಯ ಸಚಿವರು ಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ನುಡಿದರು.
ಸಭೆಯಲ್ಲಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ. ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಆಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು.
ಲಸಿಕೆ ಹಾಕಿದವರಿಗೆ ಶೇ.99.9 ಸೋಂಕಿಲ್ಲ : ಜಿಲ್ಲೆಯಲ್ಲಿ 1.70 ಲಕ್ಷ ಜನ ಲಸಿಕೆಹಾಕಿಸಿಕೊಂಡಿದ್ದಾರೆ. 8000 ಲಸಿಕೆ ಲಭ್ಯವಿದೆ. ಎಷ್ಟು ಬೇಕಾದರೂ ದಾಸ್ತಾನು ನೀಡ್ತೀವಿ ಎಂದುಸಂಬಂಧಿಸಿದ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 76 ಸೆಂಟರ್ ಇದೆ. ಮಾರ್ಗಸೂಚಿ ಪಾಲಿಸಿ ಲಸಿಕೆಹಾಕಿಸಿಕೊಳ್ಳಿ, ಕೊರೊನಾ ಬಂದ ತಕ್ಷಣ ಉಸಿರಾಟದ ತೊಂದರೆ ಆಗುತ್ತದೆ ಎಂದು ಧೈರ್ಯ ಕಳೆದುಕೊಳ್ಳಬೇಡಿ, ಕೋವಿಡ್ ಎದುರಿಸಲುಸಾಮರ್ಥ್ಯ ಇದೆ. ಧೈರ್ಯ ತುಂಬುವ ಕೆಲಸಎಲ್ಲಾ ನಾಗರಿಕರು ಮಾಡಬೇಕು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು