Advertisement
ಜಿಲ್ಲಾಸ್ಪತ್ರೆಯಲ್ಲಿ ಅಂತಹ 50 ಬೆಡ್ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 5ರಿಂದ 10 ಬೆಡ್‌ಗಳನ್ನು ಅಳವಡಿಸಲಾಗುವುದು ಎಂದು ರಾಜ್ಯದ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
Related Articles
3,500 ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಕಿಟ್‌ಗಳನ್ನು ಪೂರೈಸಲಾಗುತ್ತಿದೆ. ಇದಕ್ಕೆ ಡ್ರಗ್ ಕಂಟ್ರೋಲ್‌ನಿರ್ದೇಶಕರ ಜತೆ ಜಿಲ್ಲಾಧಿಕಾರಿಗಳು ಮಾತನಾಡು ತ್ತಾರೆ. ನಾನೂ ಮಾತನಾಡುತ್ತೇನೆ ಎಂದರು.
Advertisement
ಅಧ್ಯಾದೇಶ ಜಾರಿಕೋವಿಡ್ 19 ವಾರಿಯರ್ ಮೇಲಿನ ಹಲ್ಲೆಕೋರರ ಮೇಲೆ ಕ್ರಮಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಧ್ಯಾದೇಶ ಹೊರಡಿಸಿವೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೊದಲು ರಾಜ್ಯ ಸರಕಾರ ಅಧ್ಯಾದೇಶ ಹೊರಡಿಸಿದ ಬಳಿಕ ಕೇಂದ್ರ ಸರಕಾರ ಕಠಿನ ಕ್ರಮದ ಅಧಿಸೂಚನೆ ಹೊರಡಿಸಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಕೇಂದ್ರದ್ದೇ ಮುಖ್ಯವಾಗುತ್ತದೆ. ಅದರ ಬಗ್ಗೆ ಇನ್ನಷ್ಟು ಸ್ಪಷ್ಟತೆ ದೊರೆಯಬೇಕಾಗಿದೆ. ಪಾದರಾಯನ ಪುರದ ಘಟನೆಯ ಪ್ರಮುಖ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಮತ್ತು ಅಧ್ಯಾದೇಶವನ್ನು ಈ ಪ್ರಕರಣಕ್ಕೂ ಅನ್ವಯಿಸುವ ಸಾಧ್ಯತೆ ಇದೆ ಎಂದರು. ಉಚ್ಚಿಲದ ಪ್ರಕರಣದ ಬಗ್ಗೆ ಕೇಳಿದಾಗ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಎಸಿ ಕೊಠಡಿಯಲ್ಲಿ ಸಭೆ
ಕೋವಿಡ್ 19 ನಿಯಂತ್ರಣ ಸಭೆಯು ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆದಿದೆ.ಪತ್ರಿಕಾಗೋಷ್ಠಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಕೆ. ರಘುಪತಿ ಭಟ್, ಸುನಿಲ್ ಕುಮಾರ್, ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿ.ಪಂ. ಸಿಇಒ ಪ್ರೀತಿ ಗೆಹೊÉàತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ಸಭೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಐಜಿಪಿ ದೇವಜ್ಯೋತಿ ರೇ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಮೊದಲಾದವರು ಉಪಸ್ಥಿತರಿದ್ದರು. ಉಡುಪಿಗೆ 3 ವೆಂಟಿಲೇಟರ್
ಉಡುಪಿ: ಬಳ್ಳಾರಿಯ ಕಿಮ್ಸ್‌ಗೆ 28 ವೆಂಟಿಲೇಟರ್‌ಗಳು ಬಂದಿದ್ದು ಅದರಲ್ಲಿ ಮೂರನ್ನು ಉಡುಪಿ ಜಿಲ್ಲೆಗೆ ಕಳುಹಿಸಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಮದುವೆ ಸಮಾರಂಭಗಳಿಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶ ಕೊಡಬಹುದೇ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೇಳಿದಾಗ, ಮೇ 3ರ ಬಳಿಕ ನೋಡೋಣ ಎಂದರು. ಮೇ 3ರ ಬಳಿಕವೂ ಲಾಕ್‌ಡೌನ್ ಮುಂದುವರಿಸಿದರೆ ಬಹಳ ಕಷ್ಟವಾದೀತು; ಜನರೂ ಸಹಿಸುವುದು ಕಷ್ಟ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದಾಗ ನಿಮ್ಮ ಭಾವನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ತಿಳಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು. ಹಸಿರು ವಲಯ ಘೋಷಣೆ ಬಳಿಕ
ಹೊರಜಿಲ್ಲೆಯವರಿಗೆ ಉಡುಪಿಗೆ ಆಗಮಿಸಲು ಅವಕಾಶ ಇರುವುದು ವೈದ್ಯಕೀಯ ಮತ್ತು ಮರಣದ ಕಾರಣಕ್ಕೆ ಮಾತ್ರ. ಆಗಲೂ ಐದಕ್ಕಿಂತ ಹೆಚ್ಚು ಜನ ಬರುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಜಿಲ್ಲೆಯು ಹಸಿರು ವಲಯವಾಗಿ ಘೋಷಣೆಯಾದರೆ ಬಳಿಕ ರಾಜ್ಯದ ಈಗಾಗಲೇ ಇರುವ 11 ಹಸಿರು ವಲಯದ ಜಿಲ್ಲೆಗಳಲ್ಲಿ ಏನೇನು ಅವಕಾಶಗಳಿವೆಯೋ ಅವುಗಳನ್ನು ರಾಜ್ಯ ಸರಕಾರದ ಅನುಮತಿಯೊಂದಿಗೆ ನೀಡಲಾಗುವುದು ಎಂದರು. ವಲಸೆ ಕಾರ್ಮಿಕರಿಗೆ ಈಗ ನೀಡುತ್ತಿರುವ ಸೇವೆ ಉತ್ತಮವಾಗಿದೆ. ಹಸಿರು ವಲಯ ಘೋಷಣೆಯಾದ ಬಳಿಕ ಜಲ್ಲಿ, ಸಿಮೆಂಟ್, ಕಲ್ಲು, ಮರಳು ಇತ್ಯಾದಿ ಜನಸಾಮಾನ್ಯರಿಗೆ ದೊರೆಯುವಂತೆ ಮಾಡಲು ಯೋಜನೆ ರೂಪಿಸಿಕೊಳ್ಳಿ. ಕಾರ್ಮಿಕರು ಒಂದೂರಿನಿಂದ ಇನ್ನೊಂದೂರಿಗೆ ಹೋಗುವ ಸಂದರ್ಭವನ್ನು ಹೇಗೆ ನಿಭಾಯಿಸ ಬೇಕೆಂದು ನೀಲನಕಾಶೆ ಸಿದ್ಧಪಡಿಸಿಕೊಳ್ಳಿ. ಅಂಗಡಿಗಳನ್ನು ತೆರೆಯುವಾಗ ಜನ ಸಂದಣಿ ತಪ್ಪಿಸಲು ಬೇರೆ ಬೇರೆ ತರಹದ ವ್ಯವಹಾರಗಳಿಗೆ ಬೇರೆ ಬೇರೆ ಸಮಯವನ್ನು ನಿಗದಿಪಡಿಸಿ ಎಂದು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಕೈಗಾರಿಕೆಗಳ ಕುರಿತು ಮಾತನಾಡಿದ ಸಚಿವರು,ಗೇರು, ತೆಂಗಿನ ಕಾಯಿ ಉದ್ಯಮಕ್ಕೆಅವಕಾಶ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಗೇರು ಉದ್ಯಮವನ್ನು ಶೇ. 25 ಸಿಬಂದಿ ಸಾಮರ್ಥ್ಯದಲ್ಲಿ ನಡೆಸುವುದಾಗಿ ಗೇರು ಉದ್ಯಮದವರೇ ತಿಳಿಸಿದ್ದಾರೆಂದರು. ಯಥಾಸ್ಥಿತಿ ಮುಂದುವರಿಕೆ
ಕೇಂದ್ರ ಸರಕಾರ ಆರ್ಥಿಕ ಚಟುವಟಿಕೆಗಳನ್ನು ಆರಂಭಿ ಸಲು ಅನುಕೂಲವಾಗುವಂತೆ ಲಾಕ್‌ಡೌನ್ ತೆರವುಗೊಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ದಿನಸಿ ಅಂಗಡಿ ತೆರೆಯ ಲಾಗುತ್ತಿದ್ದು, ಇನ್ನೊಂದು ಆದೇಶ ಬರುವ ವರೆಗೆ ಹಿಂದಿನ ಆದೇಶವೇ ಜಾರಿಯಲ್ಲಿರುತ್ತದೆ ಎಂದರು. ನರೇಗಾ ಆರಂಭ
ಸ್ಥಳೀಯ ಕಸುಬು, ಮೀನುಗಾರಿಕೆ, ನರೇಗಾ ಯೋಜನೆ ಆರಂಭಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಅವಕಾಶ ನೀಡಿದಾಗ ಸಾಮಾಜಿಕ ಅಂತರದ ಸಮಸ್ಯೆ ಬರುವುದಿಲ್ಲ ಎಂದರು.