ಬೀದರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಷಿಜನ್ ಕೊರತೆಯಾಗದಂತೆ, ಶೀಘ್ರ ಆಕ್ಸಿಜನ್ ಪೂರೈಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಡಿಸಿ ರಾಮಚಂದ್ರನ್ ಆರ್ ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಡಿಸಿ, ಸಿಇಒ ಮತ್ತು ಎಸ್‌ಪಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರಿಗೆ ಜಿಲ್ಲಾಧಿಕಾರಿಗಳು ಈ ಮಾಹಿತಿಯನ್ನು ನೀಡಿದರು.
ಕೋವಿಡ್ ಸೋಂಕಿತರಿಗೆ ಅತ್ಯವಶ್ಯಕವಾಗಿರುವ ಆಮ್ಲಜನಕ ಪೂರೈಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಕ್ರಮಗಳನ್ನು ವಹಿಸುತ್ತಿದೆ. ಕರ್ನಾಟಕ ಗ್ಯಾಸಸ್, ಸಿದ್ದೇಶ್ವರ ಗ್ಯಾಸಸ್, ಸಾಯಿ ಪ್ರಸಾದ್ ಎಂಟರಪ್ರೈಜಿಸ್, ದತ್ತಾ ಟ್ರೇಡರ್, ಸಫಾ ಏಜೆನ್ಸಿಸ್ ಮತ್ತು ವಿಜಯಾ ಗ್ಯಾಸ್ ಏಜೆನ್ಸಿಸ್ ಇವರು ಆಮ್ಲಜನಕ ರೀμಲ್ ಮಾಡುವ ಸರಬರಾಜು ಏಜೆನ್ಸಿದಾರರಾಗಿದ್ದಾರೆ. ಈ ಆಮ್ಲಜನಕ ರಿಪಿಲ್ ಮಾಡುವ ಸರಬರಾಜುದಾರ ಏಜೇನ್ಸಿಗಳಿಗೆ ಪ್ರತಿದಿನ ಭೇಟಿ ನೀಡಿ, ಏಜೆನ್ಸಿಯಲ್ಲಿ ಒಟ್ಟು ಪೂರೈಕೆಯಾದ ಆಮ್ಲಜನಕದ ವಿವರವನ್ನು ಪ್ರತಿದಿನ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸುವ ಕಾರ್ಯವನ್ನು ನಡೆಸಲು ಈಗಾಗಲೇ ಕ್ಯಾಂಪ್ ಆಫೀಸರ್ ಮತ್ತು ಆಮ್ಲಜನಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಆಮ್ಲಜನಕ ವಿವರ ದ ವರದಿಯನ್ನು ಪರಿಶೀಲಿಸಿ ವೆಬ್‌ಸೈಟ್‌ಗೆ ಅಳವಡಿಸಲು ಆಮ್ಲಜನಕ ನೋಡಲ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಿವಿಧ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಿ ಸಿಲಿಂಡರ್ ರೀಫಿಲಿಂಗ್ ಹಾಗೂ ಸುಗಮ ಸಾಗಣೆಯ ವ್ಯವಸ್ಥೆಯನ್ನು ನೋಡಿಕೊಳ್ಳಲು ಕೂಡ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿವಿಧ ಗ್ಯಾಸ್ ಏಜೆನ್ಸಿ ಮತ್ತು ಕ್ಯಾಂಪ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾ ಧಿಸಿಕೊಂಡು ಕಾಲಕಾಲಕ್ಕೆ ಸಲಹೆ ಮತ್ತು ಸಹಕಾರ ನೀಡಲು ಕೂಡ ಮತ್ತೂಬ್ಬ ಅಧಿಕಾರಿಯನ್ನು ನಿಯೋಜಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಲಿಂಡರ್ ಕಾಯ್ದಿರಿಸುವಿಕೆಗೂ ಕ್ರಮ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ನಿಗಿಸುವ ನಿಟ್ಟಿನಲ್ಲಿ ಲಭ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಗ್ಯಾಸ್ ಏಜೆನ್ಸಿಯೊಂದಕ್ಕೆ ಪತ್ರ ಬರೆದು ಜಂಬೋ ಸಿಲಿಂಡರ್‌ಗಳನ್ನು ಕಾಯ್ದಿರಿಸಲು ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಈಗ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಬೇಕಾಗುತ್ತದೆ ಎಂಬುದರ ಮಾಹಿತಿ ಇದೆ. ಆದಾಗ್ಯೂ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿನ ಬೇರೆ-ಬೇರೆ ಆಸ್ಪತ್ರೆಗಳಿಗೆ ಅವಶ್ಯನುಸಾರ ಆಮ್ಲಜನಕ ಬೇಡಿಕೆಯ ಪರಿಷ್ಕೃತ ಮಾಹಿತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಅನವಶ್ಯಕವಾಗಿ ಆಮ್ಲಜನಕ ಬಳಸಬೇಡಿ: ಇದಕ್ಕೂ ಮೊದಲು ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಆಮ್ಲಜನಕ ಪೂರೈಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳು ಆಮ್ಲಜನಕ ಬೇಡಿಕೆಯ ಮಾಹಿತಿಯನ್ನು ಕೂಡಲೇ ಸಲ್ಲಿಸಬೇಕು. ಮುಖ್ಯವಾಗಿ ಆಮ್ಲಜನಕವು ಅನವಶ್ಯಕ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಿಇಒ ಜಹೀರಾ ನಸೀಮ್, ಎಸ್‌ಪಿ ನಾಗೇಶ ಡಿ.ಎಲ್., ಎಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ ಸಿ.ಎಚ್., ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ ಹಾಗೂ ಇತರರು ಇದ್ದರು.