ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವುದರಿಂದ ಆಕ್ಸಿಜನ್ ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇರೆ ಕಡೆಯಿಂದ ಪೂರೈಕೆ ಆಗುವ ಆಕ್ಸಿಜನ್ ಸದ್ಯ ಜಿಲ್ಲೆಯಲ್ಲಿ 2-3 ದಿನಗಳಿಗೆ ಸಾಕಾಗುವಷ್ಟು ಲಭ್ಯತೆ ಇದ್ದು, ಒಂದು ವೇಳೆ ವಿಳಂಬವಾದರೆ ಖಂಡಿತ ಕೊರತೆ ಎದುರಿಸಬೇಕಾಗುತ್ತದೆ.
ಜಿಲ್ಲೆಗೆ ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಿಂದ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಅವಲಂಬನೆ ತಪ್ಪಿಲ್ಲ. ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆ ಇಲ್ಲವಾಗಿದ್ದು, ನೆರೆಯ ಜಿಲ್ಲೆಗಳ ಮೇಲೆಯೇ ನಾವು ಅವಲಂಬನೆ ಆಗಬೇಕಿದೆ. ಈ ಎರಡು ಜಿಲ್ಲೆಗಳಿಂದ ಬರುವ ಆಕ್ಸಿಜನ್ ಅನ್ನು ನಗರದ ಬಿಮ್ಸ್ ಆಸ್ಪತ್ರೆಯ ಘಟಕದಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಬೇರೆ ಬೇರೆ ಕಡೆಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗ ಪ್ರತಿ ನಿತ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ 750 ಜಂಬೋ ಸಿಲಿಂಡರ್ ಆಕ್ಸಿಜನ್ ಅಗತ್ಯವಿದೆ.
ಕೊರೊನಾ ಸೋಂಕಿತರು ಹೆಚ್ಚುತ್ತಿರುವುದರಿಂದ ಈ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ 162 ಸೋಂಕಿತರಿಗೆ ಹೈಪ್ಲೋ (ವೆಂಟಿಲೇಟರ್/ಆಕ್ಸಿಜನ್) ನೀಡಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ 180 ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ನೀಡಲಾಗುತ್ತಿದೆ. ವಾರಕ್ಕೆ ಎರಡು ಸಲ 32 ಕಿಲೋ ಲೀಟರ್ ಲಿಕ್ವಿಡ್ ಆಕ್ಸಿಜನ್ ಬಳಕೆ ಆಗುತ್ತಿದೆ. 13 ಕಿಲೋ ಲೀಟರ್ ಆಕ್ಸಿಜನ್ ಸಾಮರ್ಥ್ಯದ ಘಟಕ ಬಿಮ್ಸ್‌ನಲ್ಲಿದೆ. ಧಾರವಾಡ ಮತ್ತು ಬಳ್ಳಾರಿಯಿಂದ ಜಿಲ್ಲೆಯಿಂದ ಬರುವ ಆಕ್ಸಿಜನ್ ಅನ್ನು ಇಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಇಲ್ಲಿಂದ ಬೇರೆ ಬೇರೆ ಅಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ.
ಕೆಎಲ್‌ಇ ಆಸ್ಪತ್ರೆಯಲ್ಲಿ 13 ಕಿಲೋ ಲೀಟರ್, ಲೇಕ್‌ವ್ಯೂ, ವೇಣುಗ್ರಾಮ ಆಸ್ಪತ್ರೆಯಲ್ಲಿ ತಲಾ 2 ಕಿಲೋ ಲೀಟರ್ ಸಾಮರ್ಥ್ಯದ ಘಟಕಗಳಿವೆ. ಅಥಣಿ ತಾಲೂಕಿನ ಮಂಗಸೂಳಿಯ ಎಸ್.ಎಸ್. ಆಕ್ಸಿಜನ್‌ನಲ್ಲಿ 120 ಸಿಲಿಂಡರ್ ರಿμಲ್ ಮಾಡಲಾಗುತ್ತದೆ. ಬೆಳಗಾವಿ ತಾಲೂಕಿನ ಹೊನಗಾದ ಎಂಎಸ್‌ಪಿಎಲ್ ಘಟಕ ಹಾಗೂ ನಿಪ್ಪಾಣಿಯ “ಮಹಾ ಆಕ್ಸಿ’ನಲ್ಲಿ ಪ್ರತಿದಿನ 300 ಸಿಲಿಂಡರ್ ಉತ್ಪಾದಿಸಲಾಗುತ್ತಿದೆ. ಜಿಲ್ಲಾಡಳಿತ ಬಳಿ 200 ಆಕ್ಸಿಜನ್ ಸಿಲಿಂಡರ್ ಸಂಗ್ರಹ (ಬಫರ್ ಸ್ಟಾಕ್)ವಿದೆ. ಬಳ್ಳಾರಿಯಿಂದ ಬರುವ ಆಕ್ಸಿಜನ್ ಬೇರೆ ಬೇರೆ ಏಜೆನ್ಸಿಗಳಿಗೆ ನೀಡಿ ಅಲ್ಲಿ ಸಿಲಿಂಡರ್‌ನಲ್ಲಿ ಮರುಪೂರಣ (ರಿμಲ್) ಮಾಡಲಾಗುತ್ತದೆ. ಸೋಂಕಿತರು ಹೆಚ್ಚುತ್ತ ಹೋದರೆ, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಆಕ್ಸಿಜನ್ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.