ಹುಣಸೂರು: ನಗರದ ಡಿ ದೇವರಾಜ ಅರಸ್ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಆಕ್ಸಿಜನ್ ಜನರೇಟ್ ಪ್ಲಾಂಟ್ ನಿರ್ಮಾಣ ಕಾಮಗಾರಿಗೆ ಶಾಸಕ H.P ಮಂಜುನಾಥ್ ಆಸ್ಪತ್ರೆ ಆವರಣದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಅವರು, ಹುಣಸೂರು ಆಸ್ಪತ್ರೆಗೆ 390 ಎಲ್ ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ 18.89 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಇಂಜಿನಿಯರಿಗೆ ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ಮಹಾಮಾರಿಯು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವದರಿಂದ ನಗರದ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ನಾನು ಮತ್ತು ನಮ್ಮ ಸ್ನೇಹಜೀವಿ ಬಳಗದ ಸದಸ್ಯರು ಒಟ್ಟು ಹತ್ತು ಆಮ್ಲಜನಕ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದು.ಈ ಸೇವೆಯನ್ನು ತಾಲೂಕಿನ ಜನತೆಗೆ ಸದ್ಬಳಕೆ ಮಾಡಿಕೊಡಬೇಕೆಂದು ಸ್ಥಳದಲ್ಲಿದ್ದ ತಾ. ಆರೋಗ್ಯಧಿಕಾರಿ ಡಾ. ಕೀರ್ತಿಕುಮಾರ್ ಗೆ ಸೂಚಿಸಿದರು.
ಇದನ್ನೂ ಓದಿ: ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ನೇತಾರ ಸುಂದರ್ ಲಾಲ್ ಕೋವಿಡ್ ನಿಂದ ನಿಧನ
ಈ ಸಂದರ್ಭದಲ್ಲಿ ಇ ಒ ಗಿರೀಶ್, ತಾಲೂಕು ನೋಡಲ್ ಅಧಿಕಾರಿ ಡಾ. ಮಂಜುಪ್ರಸಾದ್ ಸರ್ವೆಶ್ ರಾಜ್ ಅರಸ್. ಮಾಲಿನಿ. ಇಂಜಿನಯರ್ ಯತೀಶ್ ಸೇರಿದಂತೆ ಇತರರು ಹಾಜರಿದ್ದರು.