ಮೈಸೂರು: ಕೊರೊನಾ ಸಂಕಷ್ಟ ಹಿನ್ನೆಲೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮೈಸೂರು ವಿಭಾಗದಿಂದ ಜಿಲ್ಲಾಡಳಿತಕ್ಕೆಆಕ್ಸಿಜನ್ ಮತ್ತು ವೆಂಟಿಲೇಟರನ್ನುಕೊಡುಗೆಯಾಗಿ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮೂಲಕಜಿಲ್ಲಾಡಳಿತಕ್ಕೆ 5.5 ಟನ್ ಆಕ್ಸಿಜನ್, 1ವೆಂಟಿಲೇಟರ್ ಹಸ್ತಾಂತರಿಸಿದರು.
ಈ ವೇಳೆಸಂಕಷ್ಟದಲ್ಲಿರುವ 200 ಕುಟುಂಬಗಳಿಗೆಆಹಾರ ಕಿಟ್ ನೀಡಲಾಯಿತು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ ಪ್ರಾದೇಶಿಕ ನಿರ್ದೇಶಕಗಂಗಾಧರ್ ರೈ ಮಾತನಾಡಿ, ತಾಲೂಕಿನ ಕಳಸ್ತವಾಡಿಯಲ್ಲಿ ಕೋವಿಡ್ ಸೆಂಟರ್‌ತೆರೆದಿದ್ದೇವೆ. ಸಾವಿರಾರು ಮಂದಿಗೆಊಟೋಪಚಾರ ಮಾಡಿದ್ದೇವೆ. ಈಗಜಿಲ್ಲಾಡಳಿತಕ್ಕೂ ನೆರವು ನೀಡಿದ್ದೇವೆ ಎಂದುತಿಳಿಸಿದರು. ಯೋಜನೆ ಮೂಲಕಗ್ರಾಮಾಂತರ ಪ್ರದೇಶದ ಜನರಿಗೆ ಆರೋಗ್ಯಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. 10 ಸಾವಿರ ರೂ. ಸಾಲವಿತರಿಸಲಾಗಿದೆ. ಸಂಪೂರ್ಣ ಆರೋಗ್ಯಕಾರ್ಡ್ ನೀಡುತ್ತಿದ್ದೇವೆ ಎಂದು ಹೇಳಿದರು.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್,ವಿಶೇಷ ಕರ್ತವ್ಯಾಧಿಕಾರಿ ದಿನೇಶ್‌ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಪರ ಜಿÇÉಾಧಿಕಾರಿಡಾ. ಮಂಜುನಾಥಸ್ವಾಮಿ, ಗ್ರಂಥಾಲಯಉಪ ನಿರ್ದೇಶಕ ಹಾಗೂ ಆಕ್ಸಿಜನ್‌ನೋಡಲ್ ಅಧಿಕಾರಿ ಬಿ. ಮಂಜುನಾಥ್,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ ಜಿಲ್ಲಾ ನಿರ್ದೇಶಕ ವಿಜಯ್‌ಕುಮಾರ್ ನಾಗನಾಳ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.