ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಾಣವಾಯು ಪಡೆಯಲು ಸೋಂಕಿತರ ಪರದಾಟ ಮುಂದುವರಿದಿದ್ದು, ಕಾಫಿನಾಡು ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಅಭಾವ ಮುಂದುವರಿದಿದೆ.
ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಉಂಟಾಗಿದ್ದು, ಜಿಲ್ಲಾಡಳಿತ ಹಾಗೂ ಖಾಸಗಿ ಆಸ್ಪತ್ರೆಗಳ ಗುದ್ದಾಟದಲ್ಲಿ ಕೊರೊನಾ ರೋಗಿಗಳು ಪರದಾಟ ಪಡುವಂತಾಗಿದೆ.
ಇದನ್ನೂ ಓದಿ:ಕೋವಿಡ್ ಸೋಂಕಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ!
ನಗರದ ಆಶ್ರಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಗಾಗಿ ರೋಗಿಗಳ ಪರದಾಟ ಪಡುತ್ತಿದ್ದು, ಆಕ್ಸಿಜನ್ ಮೂಲಕ 27 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯ ವಿಜಯಕುಮಾರ್ ಅವರು ಆಕ್ಸಿಜನ್ ಗೆ ಬೇಡಿಕೆ ಇಟ್ಟಿದ್ದು, ಸಂಜೆ 5 ಗಂಟೆಯ ನಂತರ ಆಕ್ಸಿಜನ್ ಬರಲಿದೆ ಎನ್ನಲಾಗಿದೆ.
ರೋಗಿಗಳ ಕುಟುಂಬಸ್ಥರಿಗೆ ಬೇರೆ ಕಡೆ ಕರೆದುಕೊಂಡು ಹೋಗುವಂತೆ ಆಶ್ರಯ ಆಸ್ಪತ್ರೆ ವೈದ್ಯರುಗಳು ಸೂಚನೆ ನೀಡುತ್ತಿದ್ದಾರೆ.