ಯಾದಗಿರಿ: ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ ಬಳಿ ಆಕ್ಸಿಜನ್ ಉತ್ಪಾದನಾ ಘಟಕದ ಪ್ರಮುಖ ಸಾಧನವಾಗಿರುವ ಬೃಹತ್ ಕಂಟೇನರ್ ಬಂದಿಳಿದಿದ್ದು, ಯಾದಗಿರಿ ಜಿಲ್ಲೆಯಲ್ಲಿರುವ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಬಗೆಹರಿಯಲಿದೆ.
ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿತ್ಯ 70 ರಿಂದ 80 ರೋಗಿಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ.
ಇದನ್ನೂ ಓದಿ : ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ
ಸುಮಾರು 4 ಟನ್ ತೂಕವಿರುವ ಆಕ್ಸಿಜನ್ ಉತ್ಪಾದನೆ ಮಾಡುವ ಈ ಕಂಟೇನರ್ ನನ್ನು ಇಸ್ರೇಲ್ ಸರ್ಕಾರ ದಾನವಾಗಿ ನೀಡಿದೆ. ದೇಶಕ್ಕೆ ಇಸ್ರೇಲ್ ಸರ್ಕಾರ ಒಟ್ಟು ಮೂರು ಕಂಟೇನರ್ ಗಳನ್ನು ನೀಡಿದ್ದು, ಈ ಪೈಕಿ ರಾಜ್ಯಕ್ಕೆ ಎರಡು ಕಂಟೇನರ್ ಗಳನ್ನು ಕೇಂದ್ರ ಕಳುಹಿಸಿಹೊಟ್ಟಿದೆ. ರಾಜ್ಯ ಕೈಗಾರಿಕೆ ಇಲಾಖೆಯು ಯಾದಗಿರಿ ಮತ್ತು ಕೋಲಾರ ಜಿಲ್ಲೆಗೆ ತಲಾ ಒಂದೊಂದು ಕಂಟೇನರ್ ಗಳನ್ನು ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ( ಎನ್ ಡಿ ಆರ್ ಎಫ್) ಕಂಟೇನರ್ ನನ್ನು ಬಂದಿಳಿಸಿದ್ದು, ಶೀಘ್ರದಲ್ಲೇ ಇದರ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ : ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ವರದಿ