ಮಂಡ್ಯ: ಕೊರೊನಾ ಸೋಂಕು ಮಂಡ್ಯತಾಲೂಕಿನಲ್ಲಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ಬಗ್ಗೆ ನಗರಸಭೆ ಸಭಾಂಗಣದಲ್ಲಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಯಿತು.
ನಗರದಲ್ಲಿ ಮನೆಯಲ್ಲಿಯೇ ಚಿಕಿತ್ಸೆಪಡೆಯುತ್ತಿರುವವರಿಗೆ ಆರೋಗ್ಯ ಹೆಲ್ತ್ ಕಿಟ್‌ವಿತರಿಸಬೇಕು. ಮಿಮ್ಸ್‌ನಲ್ಲಿ ಆಕ್ಸಿಜನ್ ಕೊರತೆ, ಬೆಡ್‌ಕೊರತೆಯಾಗದಂತೆ ಆದ್ಯತೆ ನೀಡಬೇಕುಎಂದು ನಗರಸಭೆ ಸದಸ್ಯರುಆಗ್ರಹಿಸಿದರು.ಸೀಲ್ ಹಾಕಬೇಕು: ಕೊರೊನಾ ಪರೀಕ್ಷೆಕೊಟ್ಟವರು ಹಾಗೂ ಪಾಸಿಟಿವ್ ಬಂದವರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.
ಅಂಗಡಿ,ಮಾರುಕಟ್ಟೆಗಳಿಗೆ ಬರುತ್ತಿದ್ದಾರೆ. ಇದರಿಂದಸೋಂಕು ಹೆಚ್ಚಾಗಿ ಹರಡುತ್ತಿದೆ. ಆದ್ದರಿಂದಕೊರೊನಾ ಪರೀಕ್ಷೆಗೆ ಸ್ಯಾಬ್ ಕೊಟ್ಟವರು ವರದಿ ಬರುವವರೆಗೂ ಮನೆಯಿಂದಹೊರಬರದಂತೆ ಸೂಚನೆ ನೀಡಬೇಕು.ಕೊರೊನಾ ಪಾಸಿಟಿವ್ ಬಂದವರಿಗೆ ಸೀಲ್ ಹಾಕಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಸಂಪರ್ಕ: ಕೆಲವರುಲಕ್ಷಣಗಳಿದ್ದರೂ ಯಾವುದೇ ರೀತಿಯ ಪರೀಕ್ಷೆನಡೆಸದೆ ಪಾಸಿಟಿವ್ ಬಂದವರಿಗೆ ನೀಡಿರುವಕೊರೊನಾ ಔಷಧಗಳನ್ನು ತೆಗೆದುಕೊಳ್ಳುತ್ತಾ,ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದಾರೆ.ಇದಕ್ಕೆ ಕಡಿವಾಣಹಾಕಬೇಕುಎಂದು ಸದಸ್ಯರುಸಭೆಯ ಗಮನಕ್ಕೆ ತಂದರು.ನಗರಸಭೆ ಕಚೇರಿ ಆವರಣದಲ್ಲಿ 24ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಮಾಹಿತಿ ಕೇಂದ್ರ ತೆರೆಯಬೇಕು.
ನಗರದನಿವಾಸಿಗಳಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್‌ಗಳ ಬಗ್ಗೆ ಮಾಹಿತಿ ಒದಗಿಸಲು ಕ್ರಮಕೈಗೊಳ್ಳಬೇಕು . ಕೋವಿಡೇತರ ರೋಗಿಗಳಿಗೂಚಿಕಿತ್ಸೆ, ಆಕ್ಸಿಜನ್ ಸೌಲಭ್ಯ ಸಿಗುವಂತೆಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು,ಉಪಾಧ್ಯಕ್ಷೆ ಇಶ್ರತ್ ಫಾತಿಮಾ, ಪೌರಾಯುಕ್ತಲೋಕೇಶ್, ಡಿವೈಎಸ್ಪಿ ಮಂಜುನಾಥ್,ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿಸೇರಿದಂತೆ ಮತ್ತಿತರರಿದ್ದರು.