ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣವಾಗಿದ್ದು, ಇಲ್ಲಿ ಹೋಂ ಸ್ಟೇಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಒಂದು ವೇಳೆ ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯದ ಕೇಸ್ ಕಂಡು ಬಂದರೆ ಹೋಂ ಸ್ಟೇ ಮಾಲೀಕರೆ ಹೊಣೆ ಹೊರಬೇಕಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯಗಳ ಬಗ್ಗೆ ಹೋಂ ಸ್ಟೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ ಬಹುಮಾನ ಕೊಡುತ್ತೇವೆ. ಆದರೆ ಪ್ರಕರಣ ಮುಚ್ಚಿ ಹಾಕಿದರೆ ಹೋಂ ಸ್ಟೇ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಡ್ರಗ್ ಕಂಟ್ರೋಲ್ ಮಾಡುವುದು ವಿಶೇಷ ಪಡೆ ಮಾತ್ರವಲ್ಲ, ಪ್ರತಿಯೊಂದು ಠಾಣೆಯ ಕೆಲಸ. ಯಾವ ಠಾಣಾ ವ್ಯಾಪ್ತಿಯಲ್ಲೂ ಡ್ರಗ್ಸ್ ಹಾವಳಿ ಇರಬಾರದು ಎಂದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಸೇರಿ 17 ಮಂದಿ ಸಂಸದರಿಗೆ ಕೋವಿಡ್ ಸೋಂಕು ದೃಢ
ಕೋವಿಡ್ ನಿಯಂತ್ರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ. ಅವರಿಗೆ ಅಭಿನಂದನೆ ಹೇಳಲು ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿದರು.