Advertisement

ಸ್ವಂತ ಕಟ್ಟಿದ ರಾಖಿ 

06:00 AM Aug 26, 2018 | |

ರಕ್ಷಾಬಂಧನ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಅನುಬಂಧವನ್ನು ವ್ಯಕ್ತಪಡಿಸುವ ಹಬ್ಬ. ಹಬ್ಬ ಸನಿಹವಾಗುತ್ತಿದಂತೆ ರಾಖೀಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಖಿಯನ್ನು ಅಂಗಡಿಯಲ್ಲಿ ಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಲು ಬಹಳಷ್ಟು ಸರಳ ಉಪಾಯಗಳಿವೆ. ಸುಲಭವಾಗಿ ಸಿಗುವ ಕಾರ್ನ್ಫ್ಲೋರ್‌, ಮಣಿ, ರಿಬ್ಬನ್‌. ಮುತ್ತು ಹಾಗೂ ಹವಳ ಬಳಸಿ ಸುಂದರ ಪುಟಾಣಿ ರಾಖಿಗಳನ್ನು ಮನೆಯಲ್ಲಿ ತಯಾರಿಸಬಹುದು.

Advertisement

ಮುತ್ತು ಮಣಿಗಳ ರಾಖಿ
ಸಾಕಷ್ಟು ಬಣ್ಣ ಬಣ್ಣದ ಮಣಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವ‌ನ್ನು ಬಳಸಿ ವಿವಿಧ ವರ್ಣದ ಮಣಿಗಳನ್ನು ಕೆಂಪು ದಾರದಲ್ಲಿ ಜೋಡಿಸಿದರೆ ಸುಂದರವಾದ ಮಣಿಯ ರಾಖಿ ಸಿದ್ಧವಾಗುತ್ತದೆ. ಹೆಚ್ಚಿನ ಹುಡುಗಿಯರು ಸುಲಭವಾಗಿ ದೊರಕುವ ಅಗ್ಗದ ಕೃತಕ ಮತ್ತುಗಳ ಆಭರಣಗಳನ್ನು ಹೊಂದಿರುತ್ತಾರೆ. ಹಳೆಯ ಆಭರಣಗಳಿಂದ ಮುತ್ತುಗಳನ್ನು ಸಂಗ್ರಹಿಸಿ ಸುಂದರವಾದ ಮುತ್ತಿನ ರಾಖೀಯನ್ನು ತಯಾರಿಸಬಹುದು.

ಝಲರ್‌ ರಾಖಿ
ಈ ರಾಖಿಯನ್ನು ತಳದಲ್ಲಿ ಒಂದು ವೃತ್ತಾಕಾರದ ಆಕಾರದಲ್ಲಿಕಟ್ಟಿದ ರೇಷ್ಮೆ ಎಳೆಯಿಂದ ಮಾಡಲಾಗುತ್ತದೆ. ದಾರದ ಮೇಲ್ಭಾಗದಲ್ಲಿ ಪಾಸ್ಟಿಕ್‌ ಬಿಟೆಲ್‌ನ ವಿಶಿಷ್ಟ ಆಕೃತಿಯನ್ನು ಜೋಡಿಸಬಹುದು. 

ಆಭರಣದ ರಾಖಿ
ಈ ರಾಖೀಯನ್ನು ತಯಾರಿಸುವುದು ಬಹಳ ಸರಳ. ಮನೆಯಲ್ಲಿ ಅನಗತ್ಯ ಆಭರಣಗಳು ಸಾಕಷ್ಟಿರುತ್ತದೆ. ಹಳೆಯ ಆಭರಣಗಳಿಂದ ದೊಡ್ಡ ಪದಕವನ್ನು ತೆಗೆದುಕೊಂಡು ಕೆಂಪು ಅಥವಾ ಚಿನ್ನದ ಬಣ್ಣದ ದಾರಕ್ಕೆ ಅಂಟಿಸಿ ಸುತ್ತಲು ನಮ್ಮ ಇಚ್ಛೆಯಂತೆ  ಅಲಂಕರಿಸಬಹುದು.

ರುದ್ರಾಕ್ಷಿಯ ರಾಖಿ
ಸನಾತನ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನ ನೀಡಲಾಗಿಗೆ. ಹೀಗಾಗಿ ರಾಖಿ ಹಬ್ಬದಲ್ಲೂ ರುದ್ರಾಕ್ಷಿಯನ್ನು ಬಳಸಿ ರಾಖಿಯನ್ನು ತಯಾರಿಸಿದರೆ ಸಾಂಪ್ರದಾಯಿಕ ಅಂದ ಲಭ್ಯವಾಗುತ್ತದೆ. ಕೆಂಪು ಬಣ್ಣದ ದಾರಕ್ಕೆ ರುದ್ರಾಕ್ಷಿಯನ್ನು ಜೋಡಿಸಿ ಅದರ ಅಗಲು-ಬಗಲಿಗೆ ಚಿನ್ನದ ಬಣ್ಣದ ಮುತ್ತುಗಳನ್ನು ಪೋಣಿಸಿದರೆ ರುದ್ರಾಕ್ಷಿಯ ರಾಖಿ ಸಿದ್ಧವಾಗುತ್ತದೆ.

Advertisement

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next