Advertisement
ಸರ್ಕಾರದ ವಿರುದ್ಧವೂ ಟೀಕಾ ಪ್ರಹಾರ ನಡೆಸಿತು. ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕ ಶೈಲೇಂದ್ರ ಬೆಲ್ದಾಳೆ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಸೇರಿದಂತೆ ಇತರೆ ಮುಖಂಡರನ್ನು ಒಳಗೊಂಡ ಅಧ್ಯಯನ ತಂಡ ಬೆಳಗ್ಗೆ ಆಡೂರು ಗ್ರಾಮಕ್ಕೆ ಭೇಟಿ ನೀಡಿ ಈಚೆಗೆ ಮೃತಪಟ್ಟ ಬಾಣಂತಿ ಸಾವಿನ ಕುರಿತಂತೆ ಕುಟುಂಬದಿಂದ ಮಾಹಿತಿ ಪಡೆಯಿತು.
ಆಸ್ಪತ್ರೆಯಲ್ಲಿನ ಚಿಕಿತ್ಸಾ ವಿಧಾನದಲ್ಲಿನ ನಿರ್ಲಕ್ಷé, ದೂರದಿಂದ ಆಸ್ಪತ್ರೆಗೆ ಆಗಮಿಸಿದ ಕಾರಣ ವಿಳಂಬವಾಗಿದ್ದೂ ಸಾವಿಗೆ ಕಾರಣವಾದ ಕುರಿತು ಮೃತರ ಕುಟುಂಬಸ್ಥರು ತಂಡಕ್ಕೆ ಮಾಹಿತಿ ನೀಡಿದರು. ಮೃತ ಬಾಣಂತಿ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಡಿ ದರ್ಜೆ ನೌಕರಿ ಕೊಡಬೇಕು ಎಂದು ತಂಡದ ಮುಖಂಡರು ಒತ್ತಾಯಿಸಿದರು. ಬಳಿಕ ಜಿಲ್ಲಾಸ್ಪತ್ರೆಗೆ ಆಗಮಿಸಿದ ತಂಡ, ನೇರವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಹೆರಿಗೆ ವ್ಯವಸ್ಥೆ ಕುರಿತು ವೈದ್ಯರಿಂದ ಮಾಹಿತಿ ಪಡೆಯಿತು. ಬಾಣಂತಿ ಸಾವಿನ ಕುರಿತು ಮಾಹಿತಿ ಪಡೆದ ತಂಡವು ಸಾವಿನಲ್ಲಿ ವೈದ್ಯರ ನಿರ್ಲಕ್ಷéದ ಕುರಿತು ಅಸಮಾಧಾನ ವ್ಯಕ್ತಪಡಿಸಿತು.
Related Articles
Advertisement
ರಾಜ್ಯಪಾಲರಿಗೆ ಅಧ್ಯಯನದ ವರದಿ:ರಾಜ್ಯದಲ್ಲಿ ಬಿಜೆಪಿಯಿಂದ ವಿವಿಧ ತಂಡ ರಚಿಸಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿನ ಸಾವಿನ ಪ್ರಕರಣಗಳ ಕುರಿತು ಅಧ್ಯಯನ ನಡೆಸಿ ರಾಜ್ಯಾಧ್ಯಕ್ಷರಿಗೆ ನಮ್ಮ ಅಧ್ಯಯನದ ವರದಿ ಸಲ್ಲಿಸಲಿದ್ದೇವೆ. ನಂತರ ರಾಜ್ಯಪಾಲರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ಬಾಣಂತಿಯರ ಸಾವಿನ ಅಧ್ಯಯನದ ವರದಿ ಕೊಡಲಿದ್ದೇವೆ ಎಂದರು. ಆರೋಗ್ಯ ಸಚಿವರ ವಿಪರೀತ ಭ್ರಷ್ಟತೆ
ಆರೋಗ್ಯ ಸಚಿವ ಗುಂಡೂರಾವ್ ಅವರ ಮಿತಿ ಮೀರಿದ ಭ್ರಷ್ಟತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಎಲ್ಲವೂ ಹಾಳಾಗಿ ಹೋಗಿದೆ. ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿಲ್ಲ, ಬೇಕಾದ ಸೌಕರ್ಯಗಳಿಲ್ಲ. – ಶೈಲೇಂದ್ರ ಬೆಲ್ದಾಳೆ, ಶಾಸಕ