Advertisement
ಶುಕ್ರವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಬಲಬದಿಗೆ ಚಲಿಸಿ ಮಗುಚಿ ಬಿದ್ದಿದೆ. ಹೆಂಚುಗಳೆಲ್ಲ ರಸ್ತೆಯಲ್ಲಿ ಬಿದ್ದಿವೆ. ಕೇವಲ ಒಂದು ವಾಹನ ಸಂಚರಿಸುವಷ್ಟು ಮಾತ್ರ ಜಾಗವಿದ್ದು ಆಗಾಗ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಬಳಿಕ ಲಾರಿಯನ್ನು ಕ್ರೇನ್ ಮೂಲಕ ಮೇಲೆತ್ತಿ ಸ್ಥಳಾಂತರಿಸಲಾಯಿತು.ಆದರೂ ಹೆಂಚುಗಳು ರಸ್ತೆಯ ಅರ್ಧ ಭಾಗದಲ್ಲಿ ಚದುರಿದ್ದವು. ಪರಿಣಾಮ ಕೆಲವು ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದ ಘಟನೆಯು ನಡೆಯಿತು. ಕಾರೊಂದು ಹೆಂಚಿನ ರಾಶಿಯ ಮೇಲೆಯೇ ಚಲಿಸಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ.